ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅರುಣ್ ಸಿಂಗ್ ಇಷ್ಟೊತ್ತಿಗೆ ಸಂಪುಟ ವಿಸ್ತರಣೆ ಆಗಬೇಕಿತ್ತು, ಆದರೆ ಇನ್ನೂ ಕೂಡ ಆಗಿಲ್ಲ, ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗಲಿದೆ ಎಂದರು. ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ರಸ್ತೆ, ಚರಂಡಿ ಅಭಿವೃದ್ದಿ ಬಿಟ್ಟು ಲವ್ ಜಿಹಾದ್ ಕಡೆ ಗಮನ ಕೊಡಿ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್ ಕಟೀಲ್ ಅವರಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಬಿಜೆಪಿಯವ್ರಿಗೆ ‘LOVE’ ಮಾಡಿ ಗೊತ್ತಿಲ್ಲ, ಕಟೀಲ್ ‘ಪೋಲಿ’ ಹುಡುಗರ ಥರ ಮಾತಾಡ್ತಾರೆ’ : ಸಿಎಂ ಇಬ್ರಾಹಿಂ
ಬಿಜೆಪಿಯವ್ರಿಗೆ ‘LOVE’ ಮಾಡಿ ಗೊತ್ತಿಲ್ಲ, ಕಟೀಲ್ ‘ಪೋಲಿ’ ಹುಡುಗರ ಥರ ಮಾತಾಡ್ತಾರೆ’ : ಸಿಎಂ ಇಬ್ರಾಹಿಂ