ಕೆಎನ್ ಎನ್ ನ್ಯೂಸ್ ಡೆಸ್ಕ್ : ನಮ್ಮ ದೇಹದಲ್ಲಿರುವ ಮೂಗು ಒಂದು ಪ್ರಮುಖ್ಯತೆ ಪಡೆದಿದೆ. ಮೂಗಿಗೆ ಸ್ವಲ್ಪ ನೋವಾದ್ರೂ ಇಡೀ ದೇಹದ ಮೇಲೆ ಪರಿಣಾಮ ಬಿರುತ್ತದೆ. ಕೆಲಹೊತ್ತು ಸೀನು ಬರುತ್ತಾ ಇರುತ್ತದೆ. ಮೂಗಿನಲ್ಲಿ ರಕ್ತನಾಳಗಳು ಇರುತ್ತವೆ. ಯಾವುದೇ ಸಣ್ಣ ಹೊಡೆತವಾದರೂ, ಅದು ಬೇಗನೆ ಗಾಯಗೊಳ್ಳುತ್ತದೆ. ಇದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
BIGG NEWS: ಮಂಡ್ಯದಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದರೆ ಇಂಡಿಯಾ ಗೆದ್ದಂತೆ; ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟನೆ
ಹಲವರ ಮೂಗಿನಲ್ಲಿ ಆಗಾಗ ರಕ್ತಸ್ರಾವ ಆಗುತ್ತಿರುತ್ತದೆ. ಕೆಲವರ ಪ್ರಕಾರ ದೇಹದಲ್ಲಿನ ಶಾಖದಿಂದಾಗಿ ಈ ಸಮಸ್ಯೆ ಆಗುತ್ತದೆ. ಇನ್ನೂ ಕೆಲವರಲ್ಲಿ ಮೂಗು ಹೆಚ್ಚು
ಅದರಿಂದ ಅಥವಾ ಅದರ ಮೇಲೆ ಒತ್ತಡ ಬಿದ್ದಾಗ ಈ ಸಮಸ್ಯೆ ಆಗುತ್ತದೆ. ಮೂಗಿನಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯವಾಗಿದ್ದರೂ, ಅವುಗಳನ್ನು ನಿರ್ಲಕ್ಷಿಸಬಾರದು. ಸಾರ್ವಜನಿಕವಾಗಿ ಹೀಗಾದರೆ ಕೆಲವೊಮ್ನೆ ಮುಜುಗರವಾಗುತ್ತದೆ. ಇದರಿಂದ ನೋಡುವವರು ಭಯಗೊಳ್ಳಬಹುದು.
ಹೀಗಾಗಿ ರಕ್ತಸ್ರಾವ ಮತ್ತೆ ಸಂಭವಿಸಿದರೆ, ಯಾವುದೇ ಗಾಬರಿಗೆ ಒಳಗಾಗದೆ ಸಣ್ಣ ಸಲಹೆಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು.
BIGG NEWS: ಮಂಡ್ಯದಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದರೆ ಇಂಡಿಯಾ ಗೆದ್ದಂತೆ; ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟನೆ
ಮೂಗಿನಿಂದ ರಕ್ತಸ್ರಾವ ಆಗಲು ಕಾರಣಗಳೇನು ?
ಮೂಗಿನ ಮೇಲೆ ಒತ್ತಡ ಬೀಳುವುದು
ಮೂಗಿನಲ್ಲಿ ತುರಿಕೆ
ಶುಷ್ಕ ಅಥವಾ ಶೀತ ವಾತಾವರಣದಿಂದಲೂ ಮೂಗಿನ ಒಳಭಾಗ ಬಿರುಕು ಬೀಳಬಹುದು.
ಮೂಗಿನಲ್ಲಿ ಅಲರ್ಜಿಯಾಗುವುದು, ಅತಿಯಾದ ಸೀನುವಿಕೆ
ಸೈನಸ್ ಸಮಸ್ಯೆ
ರಕ್ತಸ್ರಾವವನ್ನು ನಿಲ್ಲಿಸುವುದು ಹೇಗೆ?
ಮೂಗಿನಲ್ಲಿ ರಕ್ತಸ್ರಾವವಾದಾಗ ಭಯ ಬೀಳಬೇಡಿ. ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಮೂಲಕ ಇದನ್ನು ಹಂತ ಹಂತವಾಗಿ ಕಡಿಮೆ ಮಾಡಬಹುದು.
*ರಕ್ತಸ್ರಾವವನ್ನು ತಡೆಯುವುದಕ್ಕೂ ಮುನ್ನ, ರಕ್ತಸ್ರಾವ ಆಗದಂತೆ ಎಚ್ಚರವಹಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಬೆರಳಿನ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಬೇಕು. ಅವುಗಳ ಉದ್ದ ಬೆಳೆದರೆ, ಮೂಗು ಸ್ವಚ್ಛಗೊಳಿಸುವಾಗ ಉಗುರು ತಾಗಿ ರಕ್ತಸ್ರಾವವಾಗಬಹುದು
BIGG NEWS : ರೈತರೇ ಗಮನಿಸಿ : ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
* ರಕ್ತಸ್ರಾವವಾದಾಗ ಮೂಗಿನ ಕೆಳಗಿನ ಮೃದುವಾದ ಭಾಗವನ್ನು ಐದು ನಿಮಿಷಗಳ ಕಾಲ ಗಟ್ಟಿಯಾಗಿ ಒತ್ತಬೇಕು. ರಕ್ತಸ್ರಾವ ಪ್ರಾರಂಭವಾದ ತಕ್ಷಣ, ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಬೇಕು
*ಮೂಗು ಸೆಟೆದುಕೊಂಡಾಗ, ರಕ್ತವು ಗಂಟಲಿಗೆ ಹೋಗುತ್ತದೆ. ನಂತರ ಅದನ್ನು ನುಂಗದೆ ಬಾಯಿಯಿಂದ ಹೊರಹಾಕಬೇಕು.