ಮೈಸೂರು: ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನಾ? ಎಂದು ಹೇಳುವ ಮೂಲಕ ತಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೂದಿಗಾಲಲ್ಲಿ ನಿಂತಿದ್ದಾರೆ.
BREAKING NEWS : ಎರಡು ‘ಗೋಏರ್ ವಿಮಾನ’ಗಳಲ್ಲಿ ತಾಂತ್ರಿಕ ದೋಷ, ಮಾರ್ಗಮಧ್ಯೆ ‘ದೆಹಲಿ ವಿಮಾನ ನಿಲ್ದಾಣ’ಕ್ಕೆ ವಾಪಸ್
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಅಂತೇನಿಲ್ಲ. ನಮ್ಮದು ಕಾಂಗ್ರೆಸ್ ಬಣ ಮಾತ್ರ, ಮತ್ಯಾವುದೇ ಬಣವಿಲ್ಲ. ಎಸ್ಎಂ ಕೃಷ್ಣರ ನಂತರ ಒಕ್ಕಲಿಗ ಸಮುದಾಯದಿಂದ ನನಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದೆ. ಹಾಗಾಗಿ ನನ್ನಗೆ ರಾಜಕೀಯವಾಗಿ ಸಹಾಯ ಮಾಡಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ಜೊತೆಗೆ ರಾಜ್ಯದ ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನಾ? ಮೊದಲು ಕಾಂಗ್ರೆಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ ಎಂದು ಇದೇ ವೇಳೆ ಹೇಳಿದ ಅವರು, ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ
BREAKING NEWS : ಎರಡು ‘ಗೋಏರ್ ವಿಮಾನ’ಗಳಲ್ಲಿ ತಾಂತ್ರಿಕ ದೋಷ, ಮಾರ್ಗಮಧ್ಯೆ ‘ದೆಹಲಿ ವಿಮಾನ ನಿಲ್ದಾಣ’ಕ್ಕೆ ವಾಪಸ್
ರಿಸಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ಸರ್ವೇ ಮಾಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಜೆಡಿಎಸ್ನ ಕೆಲ ನಾಯಕರು ಕಾಂಗ್ರೆಸ್ ಸೇರುವ ಸುಳಿವು ನೀಡಿದ ಡಿಕೆ ಶಿವಕುಮಾರ್, ಆದರೆ ಅದರ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅದನ್ನು ರಹಸ್ಯವಾಗಿ ಇಡುತ್ತೇನೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದರು.