ಕೊಚ್ಚಿ: ಕೇರಳದ ಆಲಪ್ಪುಳದ ಜಿಲ್ಲಾಧಿಕಾರಿಯಾಗಿರುವ ಕೃಷ್ಣ ತೇಜಾ ಅವರು ಸೋಮವಾರ ಈ ಪೋಸ್ಟ್ ಹಿರಿಯ ಮಹಿಳೆಯೊಬ್ಬರು ತಮ್ಮನ್ನು ಆಶೀರ್ವದ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ಚಿತ್ರದಲ್ಲಿ, ಡಿಸಿ ಕಚೇರಿಯಲ್ಲಿ ಅವನನ್ನು ಭೇಟಿ ಮಾಡಲು ಬಂದಿದ್ದ ವೃದ್ಧ ಮಹಿಳೆಯಿಂದ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು. ಮಹಿಳೆ ಅವನ ತಲೆಯ ಮೇಲೆ ತನ್ನ ಕೈಯನ್ನು ಇಟ್ಟಿರುವುದನ್ನು ಮತ್ತು ಡಿಸಿ ಗೌರವದಿಂದ ತಲೆಬಾಗುವುದನ್ನು ಕಾಣಬಹುದು. ಇದೇ ವೇಳೇ ಫೋಟೋದಲ್ಲಿ ಸಿಬ್ಬಂದಿಯೊಬ್ಬರು ನಗುವುದನ್ನು ಸಹ ಕಾಣಬಹುದಾಗಿದೆ.
ಈ ಪೋಸ್ಟ್ ಟ್ವಿಟ್ಟರ್ ನಲ್ಲಿ 14ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
What else u need #IAmForAlleppey pic.twitter.com/c0rjYUoHAk
— Krishna Teja IAS (@mvrkteja) November 7, 2022