ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಯಾಂಡಲ್ ವುಡ್ ನಟ ಕಿಶೋರ್ ಅವರು ಆಗಾಗ ಗುಡುಗುತ್ತಲೆ ಇರುತ್ತಾರೆ. ಇದೀಗ ಸಂದರ್ಶನ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿ ಅವರ ಕುರಿತು ಮಾತನಾಡಿದ್ದು 1982ರಲ್ಲಿ ಸಿನಿಮಾ ಬಂದ ನಂತರವೇ ಅವರ ಬಗ್ಗೆ ವಿಶ್ವದ ಇಂಚಿಂಚಿಗೂ ತಿಳಿಯಿತು ಎಂದು ಹೇಳಿದ್ದರು. ಇವರ ಈ ಒಂದು ಹೇಳಿಕೆಗೆ ನಟ ಕಿಶೋರ್ ಕಿಡಿ ಕಾರಿದ್ದು, ಕೆಲಸ ಮಾಡಲಾಗದ ಅಯೋಗ್ಯ ಮೋದಿಗೇನು ಹುಚ್ಚೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇನು ಹುಚ್ಚೋ … ಹೊಲಸು ಕುತಂತ್ರವೋ? ..ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನು, ನಿರುದ್ಯೋಗ,ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು ಅಮಾನ್ಯೀಕರಣ, ಕೊರೋನ, ಅದಾನಿ, ಪಿಎಮ್ ಕೇರ್ಸ್, ಚುನಾವಣಾ ಬಾಂಡ್ ಹೀಗೆ ಹಲವು ನೈಜ ಸಮಸ್ಯೆ ಸೋಲುಗಳನ್ನೂ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರತಿದಿನವೂ ಕಾನೂನು ಬಾಹಿರ ಪ್ರಚಾರವನ್ನೂ ಗಮನ ಬೇರೆಡೆ ತಿರುಗಿಸುವ ಈ ಕಳ್ಳ ಕೆಲಸವನ್ನೂ ಮಾಡುತ್ತಾ ಈ ವಿಕಸಿತ ಮಹಾಮಾನವ ಪರೀಕ್ಷಿಸುತ್ತಿರುವುದು ನಮ್ಮ ಬುದ್ಧಿಮತ್ತೆಯನ್ನ.
ಈ ಮಾತುಗಳಿಂದ ಭ್ರಮಿತರಾಗಿ ಬರೀ ಈ ತಲೆಬುಡವಿಲ್ಲದ ಮಾತುಗಳ ಬಗ್ಗೆಯೇ ಗಮನವಿಡುತ್ತೇವೆಯೋ ಇಲ್ಲಾ ಮೂಲಭೂತ ಸಮಸ್ಯೆಗಳನ್ನು ಮರೆಯದೇ ಓಟು ಹಾಕುತ್ತೇವೆಯೋ ನಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು. ನಾವು ಮೂರ್ಖರಾದೆವೋ ಇಲ್ಲವೋ ತಿಳಿಯಲು ಜೂನ್ 4 ರ ವರೆಗೆ ಕಾದು ನೋಡಬೇಕಿದೆ’ ಎಂದು ಕಿಶೋರ್ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಇವರ ಈ ಒಂದು ಪೋಸ್ಟ್ ಗೆ ಹಲವಾರು ಕಮೆಂಟ್ಸ್ ಬಂದಿದ್ದು, ಸುಳ್ಳರ ಮಹಾ ಸುಳ್ಳುಗಾರ, ಕಿಶೋರ್ ಸರ್ ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ಒಬ್ಬರು ಬೆಂಬಲಿಸಿದ್ದಾರೆ.ಮತ್ತೊಬ್ಬರು ಕುತಂತ್ರ ಇತಿಹಾಸವನ್ನು ತಿರುಚುವ ಒಂದು ಪ್ರಯತ್ನ. ಇನ್ನು ಎರಡು ತಲೆಮಾರಿನ ನಂತರ ಒಬ್ಬ ಹೇಳುತ್ತಾನೆ ನೋಡಿ ಜನಪ್ರಿಯ ಪ್ರದಾನ ಮಂತ್ರಿ ಹೇಳಿರುವುದು ಇದೇ ನಿಜವಾದ ಇತಿಹಾಸ ಎಂದು ಹೇಳುತ್ತಾರೆ ಎಂದು ತಿಳಿಸಿದ್ದಾರೆ. ಫೇಕು ಮೋದಿ. ಸ್ಕೂಲ್ ಗೆ ಹೋಗುವ ಸಂದರ್ಭದಲ್ಲಿ ಇಲ್ಲದ ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾಡಿ ಅದನ್ನು ಮಾರಾಟ ಮಾಡಿದ್ದೇನೆ ಎಂದು ಬೋಗಸ್ ಭಾಷಣ ಬಿಗಿದಿದ್ದರ ಪರಿಣಾಮ ಇದು ಎಂದು ಕಿಶೋರ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.