ಭಟ್ಕಳ: ನಗರದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿಯೇ ಟಿಪ್ಪು ಸುಲ್ತಾನ್ ಹೆಸರಿನ ಸ್ವಾಗತ ಗೋಪುರ ನಿರ್ಮಾಣಕ್ಕೆ ಮುಂದಾಗಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಭಟ್ಕಳದಲ್ಲಿ ಈಗ ಇದು ವಿವಾದಕ್ಕೆ ಕಾರಣವಾಗಿ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಭಟ್ಕಳದ ಸುಲ್ತಾನ್ ಸ್ಟ್ರೀಟ್ ಮೂಲಕ ಆರಸಕೇರಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಸಾಗುವಂತ ಮಾರ್ಗದಲ್ಲಿ, ಟಿಪ್ಪು ಸುಲ್ತಾನ್ ಹೆಸರಿನ ಸ್ವಾಗತ ಗೋಪುರ ನಿರ್ಮಾಣಕ್ಕೆ ಮಾಡಲು ತಯಾರಿ ನಡೆಸಲಾಗಿದೆ.
ಈ ಸಂಬಂಧ ಪ್ಲೆಕ್ಸ್ ಕೂಡ ಎಲ್ಲೆಲ್ಲೂ ಹಾಕಲಾಗಿದೆ. ಇದಲ್ಲದೇ ಇಂದು ಮುಂಜಾನಿ ಈ ಗೋಪುರ ನಿರ್ಮಾಣಕ್ಕಾಗಿ ಹೊಂಡ ತೆಗೆಯುತ್ತಿದ್ದಂತ ವೇಳೆಯಲ್ಲಿ, ಪೊಲೀಸರಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಆಯ ತೆಗೆಯುವುದನ್ನು ನಿಲ್ಲಿಸಿದ್ದಾರೆ. ಈ ವಿಷಯದಿಂದಾಗಿ ಅನ್ಯಕೋಮುಗಳ ನಡುವೆ ಗಲಾಟೆಗೂ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಹೀಗಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.