ವಿಜಯಪುರ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ವಿಜಯಪುರದ ಹಝ್ರತ್ ಹಾಶಿಂಪೀರ್ ದರ್ಗಾದ ಧರ್ಮಾಧಿಕಾರಿ ಸೈಯದ್ ಮೊಹಮ್ಮದ್ ತನ್ವೀರ್ ಪೀರ್ ಹಾಸಿಂ ಹೇಳಿಕೆ ನೀಡಿದರು.
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, 2014 ರಿಂದ ನಡೆದಿರುವ ನಿಮ್ಮ ಎಲ್ಲಾ ರೆಕಾರ್ಡ್ ನಮ್ಮ ಬಳಿ ಇದೆ. ಸಿಎಎ ಕೂಡ ಪಾಸ್ ಮಾಡಲು ನಾವು ಬಿಡಲಿಲ್ಲ. ನೀವು ಮಾಡಿರೋ ಆಕ್ಟ್ ಹಿಂಪಡೆಯುವಂತೆ ಹೋರಾಟ ಮಾಡುತ್ತೇವೆ. ನಮ್ಮ ಧರ್ಮಕ್ಕಾಗಿ ನಾವು ಯಾವ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದರು.
ದೇಶದ ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ಪಾರ್ಲಿಮೆಂಟ್ ಪಾಸ್ ಮಾಡುವ ಕಾಯ್ದೆ ಒಪಬೇಕೆಂದು ಹೇಳುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ರೀತಿ ಹೇಳುತ್ತಾರೆ. ಆದರೆ ನಾವು ಒಪ್ಪಲ್ಲ ನೀವು ಮತ್ತೆ ಇದನ್ನು ಪಾರ್ಲಿಮೆಂಟ್ ನಲ್ಲಿ ತರಬೇಕು. ಮೋದಿ ಮುಸ್ಲಿಮರ ಪರವಾಗಿ ಒಂದೇ ಒಂದು ಕಾನೂನು ಮಾಡಿಲ್ಲ. ವಕ್ಫ್ ಬಿಲ್ ತರುವ ಮೊದಲು ಮುಸ್ಲಿಮರನ್ನು ನೀವು ಕೇಳಿದ್ದೀರಾ? ಜೆಪಿಸಿ ಕಮಿಟಿ ಸದಸ್ಯರ ಮಾತನ್ನು ಮಾತ್ರ ಕೇಳಿದ್ದೀರಿ.
ವಕ್ಫ್ ತಿದ್ದುಪಡಿ ಕಾಯ್ದೆ ತರಬೇಡಿ ಎಂದು ಶೇಕಡ 99 ರಷ್ಟು ಜನ ಹೇಳಿದ್ದಾರೆ. ಆದರೂ ಯಾಕೆ ತಿದ್ದುಪಡಿ ಮಾಡಿದ್ದೀರಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ. ಕರ್ನಾಟಕದಲ್ಲಿ ಮುಸ್ಲಿಂಯತರರು ಕೂಡ ಈ ಕಾಯ್ದೆಯನ್ನು ವಿರೋಧಿಸಿದ್ದಾರೆ. ದೇಶದ ಗಲ್ಲಿ ಗಲ್ಲಿ ಗಲ್ಲಿ ಮುಸ್ಲಿಂರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಜಯಪುರದಲ್ಲಿ ಸೈಯದ್ ಮೊಹಮ್ಮದ್ ತನ್ವೀರ್ ಖಾಸಿಂ ಹೇಳಿಕೆ ನೀಡಿದರು.