ಕಾರವಾರ : ರಾಜ್ಯದಲ್ಲಿಆರೋಗ್ಯ ಕವಚ 108 ಅಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆಯಾಗ್ತಿರುವ ಹಿನ್ನೆಲೆ ಕಾರವಾರದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿ, ಆರೋಗ್ಯ ಕವಚ 108 ಯೋಜನೆ ಕೇವಲ ತಾಂತ್ರಿಕ ಸಮಸ್ಯೆಯಿಂದ ಮಾತ್ರವಲ್ಲ, ಆಂಬ್ಯುಲೆನ್ಸ್ ಮತ್ತು ಸಿಬ್ಬಂದಿ ಕೊರತೆಯನ್ನೂ ಅನುಭವಿಸುತ್ತಿದೆ. 108 ಆಂಬುಲೆನ್ಸ್ ಸೇವೆ 2006-07ರಲ್ಲಿ ಫ್ರಾರಂಭವಾಗಿದೆ. ಮೊದಲು ಸತ್ಯ ಎಂಬ ಸಂಸ್ಥೆಗಳಿಗೆ ನಿರ್ವಹಣೆಗೆ ನೀಡಲಾಗಿತ್ತು. ನಂತರ ಜಿವಿಕೆ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿದೆ. ಆದರೆ ಇತ್ತೀಚೆಗೆ ಈ ಸಂಸ್ಥೆ ಸರಿಯಾಗಿ ಸೇವೆ ನೀಡುತ್ತಿಲ್ಲ ಮುಂದಿನ ಒಂದು ವರೆ ತಿಂಗಳಿನಲ್ಲಿ ಸಮಸ್ಯೆಯನ್ನುಬಗೆಹರಿಸುತ್ತೇವೆ ಎಂದು ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.