ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿ ಜನಸ್ಪಂದನಾ ಸಮಾವೇಶ ಹಮ್ಮಿಕೊಂಡಿದ್ದು, ಸರ್ಕಾರದ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ ಎಂದುಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಸಮಾವೇಶ ಮೂಲಕ ವಿಪಕ್ಷದವರಿಗೆ ಉತ್ತರಿಸುತ್ತೇವೆ. ಜನರ ಸ್ಪಂದನೆಯನ್ನ ವಿಪಕ್ಷದವರು ನೋಡುತ್ತಾರೆ. ನಮಗೂ ಕೂಡ ಸಮಾವೇಶದ ಬಗ್ಗೆ ಸಾಕಷ್ಟು ಉತ್ಸಾಹ ಹೆಚ್ಚಾಗಿದೆ. ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಸೇರಿ ೧೫ ಕ್ಷೇತ್ರ ಇದೆ. ಅದರಲ್ಲಿ ಕನಿಷ್ಟ ನಾವು ೮ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.