ನವದೆಹಲಿ: ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಗೆ ಹೋಗಲಾಗುವುದು ಅಂತ ಮಾಜಿ ಸಿಎಂ ಬಿ.ಎಸ್ ಯಡಿಯ್ಯೂರಪ್ಪನವರು ಹೇಳಿದ್ದಾರೆ. ಅವರು ಇಂದು ನವದೆಹಲಿಯಲ್ಲಿ ಇದ್ದು, ಇದೇ ವೇಳೆ ಅವರು ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜಒತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೇ ಅವರು ಮಾತನಾಡಿ ಇಂದು ರಾತ್ರಿ ಕ್ಕೆ ನಡ್ಡಾ ಅವರನ್ನು ಭೇಟಿಯಾಗುವುದಾಗಿ ಮಾಹಿತಿ ನೀಡಿ, ಅಮಿತ್ ಶಾ ಅವರನ್ನು ಭೇಟಿಯಾಗುವುದಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ ಅಂತ ತಿಳಿಸಿದರು.
ಇನ್ನೂ ಇನ್ನೂ ಮಾಜಿ ಸಿಎಂ ಬಿಎಸ್ವೈ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ 20 ನಿಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಎಸ್ವೈ ಅವರು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಇದೇ ಸೆಪ್ಟಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು, ಈ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.