ಯುಎಸ್ : ಗುಜರಾತ್ನ ಮೋರ್ಬಿ ಸೇತುವೆ ಕುಸಿತದಿಂದ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸಂತಾಪ ಸೂಚಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ, ನಾವು ಭಾರತೀಯ ಜನರೊಂದಿಗೆ ನಿಲ್ಲುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
Jill and I send our deepest condolences to the families who lost loved ones during the bridge collapse in India, and join the people of Gujarat in mourning the loss of too many lives cut short. In this difficult hour, we will continue to stand with and support the Indian people.
— President Biden (@POTUS) October 31, 2022
ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ʻಗುಜರಾತಿನ ಸೇತುವೆ ದುರಂತದಿಂದ ಶೋಕಿಸುತ್ತಿರುವ ಭಾರತದ ಜನರೊಂದಿಗೆ ನಾವು ನಿಲ್ಲುತ್ತೇವೆ. ನಮ್ಮ ಹೃದಯಗಳು ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಇರುತ್ತದೆʼ ಎಂದು ದುಖಃ ವ್ಯಕ್ತಪಡಿಸಿದ್ದಾರೆ.
We stand with the people of India who are mourning the victims of the devastating bridge collapse in Gujarat. Our hearts are with those who lost loved ones and all those impacted.
— Vice President Kamala Harris (@VP) October 31, 2022
ಭಾನುವಾರ ಸಂಜೆ ಗುಜರಾತ್ನ ಮೊರ್ಬಿ ಜಿಲ್ಲೆಯ ಮಚ್ಚು ನದಿಯಲ್ಲಿ ಕೇಬಲ್ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದು ಬ್ರಿಟಿಷರ ಕಾಲದ ಸೇತುವೆಯಾಗಿದ್ದು, ಇತ್ತೀಚೆಗೆ ದುರಸ್ತಿ ಮಾಡಿ, ನವೀಕರಣಗೊಳಿಸಲಾಗಿತ್ತು. ಕಳೆದ 6 ದಿನಗಳ ಹಿಂದೆ ಈ ಸೇತುವೆಯನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿತ್ತು. ಭಾನುವಾರ ಸೇತುವೆ ಮೇಲೆ ಜನರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಭಾರ ತಾಳಲಾರದೆ ಸೇತುವೆ ಕುಸಿದುಬಿದ್ದು, ದುರಂತ ಸಂಭವಿಸಿತ್ತು.
BIGG NEWS : ಅಪ್ರಾಪ್ತ ವಯಸ್ಕ ಮುಸ್ಲಿಂ ಬಾಲಕಿಯ ವಿವಾಹ ರದ್ದು : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
SHOCKING NEWS: 6 ವರ್ಷದ ಬಾಲಕಿಯ ಮೇಲೆ ʻಡಿಜಿಟಲ್ ರೇಪ್ʼ: ಕಾಮುಕ ಅರೆಸ್ಟ್
BIGG NEWS: ಅಪ್ಪುʼಗೆ ʻಕರ್ನಾಟಕ ರತ್ನ ಪ್ರಶಸ್ತಿʼ ಪ್ರದಾನ: ವಿಧಾನಸೌಧ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ
BIGG NEWS : ಅಪ್ರಾಪ್ತ ವಯಸ್ಕ ಮುಸ್ಲಿಂ ಬಾಲಕಿಯ ವಿವಾಹ ರದ್ದು : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು