ಕೊಚ್ಚಿ: . ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ 4,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಿದರು.
ಇದಕ್ಕೂ ಮುನ್ನ ಅವರು ತ್ರಿಶೂರ್ ನ ಗುರುವಾಯೂರು ದೇವಸ್ಥಾನ ಮತ್ತು ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತ್ರಿಶೂರ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು. ದರ್ಶನದ ನಂತರ ಪ್ರಧಾನಿ ಮೋದಿ ನೇರವಾಗಿ ಕೊಚ್ಚಿಗೆ ತಲುಪಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಶಕ್ತಿ ಕೇಂದ್ರದ ಉಸ್ತುವಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
“ಕೇರಳದ ಜನರ ಪ್ರೀತಿ ಮತ್ತು ಬೆಂಬಲ ನನಗೆ ಸ್ಫೂರ್ತಿ ನೀಡುತ್ತದೆ. ಇಂದು, ಮೊದಲನೆಯದಾಗಿ, ನಾನು ಗುರುವಾಯೂರಪ್ಪನ್ ಅವರ ಆಶೀರ್ವಾದ ಪಡೆಯಲು ಗುರುವಾಯೂರು ದೇವಸ್ಥಾನಕ್ಕೆ ಹೋಗಿದ್ದೆ ಮತ್ತು ದೇವಾಲಯದ ಹೊರಗೆ ಸಾವಿರಾರು ಜನರು ನನ್ನನ್ನು ಆಶೀರ್ವದಿಸಲು ಜಮಾಯಿಸಿದರು. ನಾನು ನಿಮ್ಮ ಮುಂದೆ ತಲೆ ಬಾಗುತ್ತೇನೆ. ರಾಜಕೀಯ ಪ್ರಕ್ಷುಬ್ಧತೆಯ ಸಮಯದಲ್ಲಿಯೂ ಭಾರತದ ಸೇವೆಗೆ ಬದ್ಧರಾಗಿರುವವರು. ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತಲೆಮಾರುಗಳ ಬಿಜೆಪಿ ಕಾರ್ಯಕರ್ತರು ಕೇರಳದಲ್ಲಿ ಬಿಜೆಪಿ ಧ್ವಜವನ್ನು ಹಾರಿಸುತ್ತಲೇ ಬಂದಿದ್ದಾರೆ” ಎಂದು ಅವರು ಹೇಳಿದರು. ಇಂದು ಬಿಜೆಪಿ ಜನರ ಪಕ್ಷವಾಗಿ ಮಾರ್ಪಟ್ಟಿದೆ. ಇದು ತ್ವರಿತ ಬೆಳವಣಿಗೆಯ ದಾಖಲೆಯನ್ನು ಹೊಂದಿರುವ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ ಏಕೈಕ ಪಕ್ಷವಾಗಿದೆ ಅಂತ ಅವರು ಇದೇ ವೇಳೇ ಹೇಳಿದರು.
PM Shri @narendramodi attends Shaktikendra Incharges Sammelan in Kochi, Kerala. https://t.co/vwZwVnztSQ
— BJP (@BJP4India) January 17, 2024