ಮಂಡ್ಯ : 62 ವರ್ಷಗಳ ಸುದೀರ್ಘ ಸಮಯದಿಂದ ಪಕ್ಷವನ್ನು ಕಟ್ಟಲಾಗಿದೆ.ದೇಶದ ಅಭಿವೃದ್ಧಿಗೆ ಮುನ್ನಡಿ ಬರೆದಿರುವ ಪಕ್ಷದ ಜೊತೆ ಕೈ ಜೋಡಿಸಿದ್ದೇವೆ. ಮೈತ್ರಿ ಅಭ್ಯರ್ಥಿಗೆ ತಳಮಟ್ಟದಿಂದ ಕೆಲಸ ಮಾಡಬೇಕಿದೆ.ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮ ಪಡಬೇಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದರು.
ಮದ್ದೂರಿನಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ. ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. 2019 ರ ಸೋಲು ಕಾರ್ಯಕರ್ತರ ಸೋಲಾಗಿದೆ. ಜಿಲ್ಲೆಯಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಅವರ ಸರ್ಕಾರ ಇರಲಿಲ್ಲ ಎಂದರು.
6 ಕೋಟಿ ಕನ್ನಡಿಗರ ಆಶೀರ್ವಾದ ಇದ್ದರೆ ರೈತರ ಸಾಲ ಮನ್ನಾ ಮಾಡ್ತಿವಿ ಅಂತ ಹೇಳಿದ್ರು. ಆದರೆ ನಮಗೆ 36 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವು. ನಾವು ಯಾರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಆದರೆ ದೆಹಲಿ ದೊರೆಗಳು ತಮ್ಮ ಮನೆಯ ಬಳಿ ಬಂದು ಬಿಜೆಪಿ ನಾಯಕರ ಜೊತೆ ಕೈ ಜೋಡಿಸಬೇಡಿ ಎಂದು ಮುಖ್ಯಮಂತ್ರಿ ಮಾಡಿದರು. ರಾಜ್ಯದ ಆರ್ಥಿಕ ಪರಿಸ್ಥಿಯನ್ನು ಅರ್ಥ ಮಾಡಿಕೊಂಡು ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಜೊತೆ ಮೈತ್ರಿಯಾಗಿತ್ತು. 90 ವರ್ಷದ ಹಿರಿಯ ಜೀವಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಸ್ಪರ್ಧೆ ಮಾಡಿಸಿ ಬೆನ್ನಿಗೆ ಚೂರಿ ಹಾಕಿದರು.ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆಯನ್ನು ತರಾತುರಿಯಲ್ಲಿ ಮಾಡಿದ್ದಾರೆ. ನನ್ನ ಸೋಲಿಸೋಕೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಬೆಂಬಲ ನೀಡಿದ್ದಿರಿ.2019 ರ ಕಹಿ ಘಟನೆ ಮರುಕಳಿಸಬಾರದು. ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಬೇಕು ಎಂದು ಅವರು ಹೇಳಿದರು.
ಖರ್ಗೆ ಅವರು ಸಿಎಂ ಆಗ್ಬೇಕು ಅಂತ ದೇವೆಗೌಡರು ಬೆಂಬಲ ಕೊಟ್ಟಿದ್ದರು. ಪ್ರಥಮ ಬಾರಿಗೆ ಬಿಜೆಪಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ್ರು. 20 ತಿಂಗಳ ಆಡಳಿತದಲ್ಲಿ ಜನತಾ ದರ್ಶನ ಎಂಬ ಬೃಹತ್ ಕಾರ್ಯಕ್ರಮ ಜನಮಾನಸದಲ್ಲಿ ಉಳಿದಿದೆ.ಗ್ರಾಮ ವಾಸ್ತವ್ಯ ಎಂಬ ಜನಪರವಾದ ಕಾರ್ಯಕ್ರಮ. ಹೆಚ್ಐವಿ ರೋಗಿಯ ಮನೆಯಲ್ಲಿ ವಾಸ್ತವ್ಯ ಮಾಡಿದ್ರು.ಇಂತಹ ಜನಪರ ಕಾರ್ಯಕ್ರಮಗಳನ್ನು ನೀಡಿದ್ರೆ ಅದು ಕುಮಾರಸ್ವಾಮಿ ಎಂದರು.
ರಾಜ್ಯದಲ್ಲಿ ಇಂದು ಇಬ್ಬರು ಹೃದಯವಂತರು ಸ್ಪರ್ಧೆ ಮಾಡುತ್ತಿದ್ದಾರೆ. ಸಾವಿರಾರು ಜೀವಗಳನ್ನು ಉಳಿಸಿದ ಡಾ.ಮಂಜುನಾಥ್ ಸ್ಪರ್ಧೆ ಮಾಡ್ತಿದ್ದಾರೆ. ಮಂಡ್ಯದ ಸಾವಿರಾರು ಹೃದಯಗಳಲ್ಲಿರುವ ಕುಮಾರಣ್ಣ ಸ್ಪರ್ಧೆ ಮಾಡ್ತಿದ್ದಾರೆ. ಅಧಿಕಾರ ತಾತ್ಕಾಲಿಕ, ಅಧಿಕಾರದ ಮದ, ಕಾಂಗ್ರೆಸ್ ನಾಯಕರಿಗೆ ತುಂಬಿ ಹೋಗಿದೆ ಎಂದು ಅವರು ಹೇಳಿದರು.
ಮಂಡ್ಯದಲ್ಲಿ ಯಾರು ಗಂಡಸರು ಇಲ್ವಾ ಎಂಬ ಕದಲೂರು ಉದಯ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿಲ್ವ? ರಾಹುಲ್ ಗಾಂಧಿ ಕೇರಳದಲ್ಲಿ ಸ್ಪರ್ಧೆ ಮಾಡಿಲ್ವ? ಸಿಎಂ ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಸ್ಪರ್ಧೆ ಮಾಡಿಲ್ವ? ಕುಮಾರಸ್ವಾಮಿ ಮಂಡ್ಯ ಗೆ ಬಂದ್ರೆ ಏನು? ಎಂದು ಮದ್ದೂರು ಕ್ಷೇತ್ರದ ಕೆ.ಎಂ.ಉದಯ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.ಕುಮಾರಸ್ವಾಮಿ ಅವರನ್ನು ದೆಹಲಿಗೆ ಕಳುಹಿಸಲು ನೀವೆಲ್ಲ ಶ್ರಮ ಪಡಬೇಕಿದೆ.ಕಾವೇರಿ ನದಿ ನೀರಿನ ಸಮಸ್ಯೆಗೆ ಕುಮಾರಸ್ವಾಮಿ ಗೆಲ್ಲಬೇಕಿದೆ ಎಂದು ತಿಳಿಸಿದರು.