ಬೆಳಗಾವಿ: ಧಮ್ಕಿ ಹಾಕಿ ಮೀಸಲಾತಿ ಪಡಿಯುತ್ತಿದ್ದಾರೆ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಸಾಗರದಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದುರ್ಮರಣ
ನಾವು ಯಾರು ಧಮ್ಕಿ ಹಾಕಿಲ್ಲ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಡಿ. 29ರಂದು ಮೀಸಲಾತಿ ಪ್ರಕಟಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಯಾರಿಗೂ ಧಮ್ಕಿ ಹಾಕಿಲ್ಲವೆಂದರು. ಆರ್.ಅಶೋಕ್ ಹಳೇ ಮೈಸೂರು ಭಾಗದಲ್ಲಿ 50 ಸೀಟ್ ಗೆಲ್ಲಿಸಿಕೊಂಡು ಬರಲಿ. ಅವಾಗ ಮೀಸಲಾತಿ ನೀಡುವ ಬಗ್ಗೆ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.
ದೇವೇಗೌಡ್ರ ರೀತಿ ಅಶೋಕ್ ಸೀಟು ಗೆದ್ದು ಬರಲಿ. ನಾವು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಬಿಜೆಪಿ ಹಿಂದೂಗಳನ್ನ ಗೆಲ್ಲಿಸಿ ತರುತ್ತೇವೆ. ಬರಿ ಕಥೆ ಹೇಳಿದ್ರೆ ಸಾಲದು. ನಾವು ಯಾರಿಗೂ ಚಾಲೆಂಜ್ ಮಾಡುವುದಿಲ್ಲ. ಧಮ್ಕಿ ಅಂದಿದಕ್ಕೆ ಉತ್ತರ ಕೊಡುತ್ತಿದ್ದೇನೆ ಎಂದರು.