Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಟ್ಟಡ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪಾಪಿ ಪತ್ನಿ

17/11/2025 4:39 PM

BREAKING : ಬಿಹಾರ ವಿಧಾನಸಭೆ ವಿಪಕ್ಷ ನಾಯಕರಾಗಿ ‘ತೇಜಸ್ವಿ ಯಾದವ್’ ಆಯ್ಕೆ

17/11/2025 4:36 PM

ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತೇಜಸ್ವಿ ಯಾದವ್ ಆಯ್ಕೆ

17/11/2025 4:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ: ಸಂಸದ ಬಸವರಾಜ ಬೊಮ್ಮಾಯಿ
KARNATAKA

ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0905/01/2025 9:45 PM

ಧಾರವಾಡ: ನಮ್ಮ ಮಣ್ಣಿನ ಮಕ್ಕಳನ್ನು ಗುರುತಿಸಲು ನಾವು ವಿಫಲರಾಗಿದ್ದೇವೆ. ಧಾರವಾಡದ ಅಂತಸತ್ವ ಆತ್ಮೀಯತೆ, ಪ್ರೀತಿ, ವಿಶ್ವಾಸ. ಅಂತಕರಣ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಶ್ರೀ ಚನ್ನವೀರೌಡ ಅಣ್ಣಾ ಶಿದ್ರಾಮಗೌಡ ಪಾಟೀಲ್ ಸಂಸ್ಕರಣೆ ದತ್ತಿ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಪಾಟೀಲ್ ಬರೆದಿರುವ ಸೈದಾಪುರ ಸಿ.ಎಸ್.ಪಾಟೀಲ ಜೀವನ ಮತ್ತು ಸಾಧನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ನೂರಾರು ವರ್ಷಗಳಿಂದ ಜಗತ್ತಿಗೆ ಮಹಾಪುರುಷರನ್ನು ಕೊಟ್ಟ ಈ ಮಣ್ಣಿನ ಗುಣ, ಕೇವಲ ಧಾರವಾಡದಲ್ಲಿ ಹುಟ್ಟಿದವರಷ್ಟೇ ಅಲ್ಲ, ಮಹಾರಾಷ್ಟ್ರ, ಗೋವಾದಿಂದ ಬಂದು ಇಲ್ಲಿ ವಿದ್ಯಾರ್ಜನೆ ಪಡೆದು ಉನ್ನತ ಹುದ್ದೆ ಪಡೆದವರು ಅನೇಕರು ಇದ್ದಾರೆ. ನನಗೆ ಧಾರವಾಡದಲ್ಲಿ ಸ್ನೇಹಿತರು ಅತಿ ಹೆಚ್ಚಿದ್ದಾರೆ ಎಂದರು.

ನಮ್ಮೆಲ್ಲರ ಹಿರಿಯರು ಸಿ.ಎಸ್. ಪಾಟೀಲರು ಆ ಕಾಲದಲ್ಲಿ ಅದ್ಭುತ ಸಾಧನೆ ಮಾಡಿದರು. ನಾವೆಲ್ಲ 21 ನೇ ಶತಮಾನ ಜ್ಞಾನದ ಶತಮಾನ ಅಂತ ಹೇಳುತ್ತೇವೆ. ಆದರೆ. ಪಾಟೀಲರು 20 ನೇ ಶತಮಾನದಲ್ಲಿ ಶಿಕ್ಷಣದ ಮಹತ್ವ ತಿಳಿದು ವಿದ್ಯಾರ್ಜನೆ ಮಾಡುತ್ತೇನೆ ಎಂದು ಛಲದಿಂದ ಶಿಕ್ಷಣ ಪಡೆದಿದ್ದರು. ಅವತ್ತು ಇಂಜನೀಯರಿಂಗ್ ಮಾಡುತ್ತೇನೆ ಎಂದು ಮಾಡಿರುವುದು ಅವರ ದೂರದೃಷ್ಟಿಯ ಪ್ರತೀಕ, ಈ ದೇಶ ಈ ನಾಡು ಜಗತ್ತಿನಲ್ಲಿ ಅಮೂಲಾಗ್ರವಾಗಿರುವಂತಹ ಮೂಲಭೂತ ಬದಲಾವಣೆ ಮಾಡುವಂತಹದ್ದು ದೇಶ ಅಥವಾ ಸಂಸ್ಥೆಗಳಲ್ಲಾ, ವ್ಯಕ್ತಿಗಳು ಬದಲಾವಣೆ ಮಾಡಿದ್ದಾರೆ. ಬುದ್ಧ, ಬಸವ, ಕ್ರಿಸ್ತ, ಪೈಗಂಬ‌ರ್ ಬದಲಾವಣೆ ತಂದವರು, ವ್ಯಕ್ತಿಯಲ್ಲಿ ಗುರಿ, ಗುರಿ ಮುಟ್ಟುವ ದಾರಿ ಸಾಧನೆಯ ಶಕ್ತಿ ಎಲ್ಲವೂ ಕೇಂದ್ರಿಕೃತವಾದ ಮನಸ್ಸಿನಿಂದ ಮಾಡಲು ಸಾಧ್ಯ. ಜಗತ್ತಿನಲ್ಲಿ ಮಹಾ ಕ್ರಾಂತಿಗಳಾಗಿವೆ. ಫ್ರೆಂಚ್ ಕಾಂತಿ, ರಷ್ಯನ ಕ್ರಾಂತಿ, ಚೀನಾ ಕಾಂತಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮಲ್ಲಿ ಏಕಾಗ್ರತೆ ಇತ್ತು. ಸ್ವಾತಂತ್ರ ಬಂದ ಮೇಲೆ ಏಕಾಗತೆ ಹೋಗಿ ಎರಡು ದೇಶವಾಗಿ ಒಡೆಯಿತು. ಬದಲಾವಣೆಯನ್ನು ಹೇಗೆ ನಿರ್ವಹಿಸಬೇಕು, ಬದಲಾವಣೆ ನಂತರ ಏನು ಎನ್ನುವ ಚಿಂತನೆ ಆಗಬೇಕು. ಬುದ್ಧ, ಬಸವ, ಕ್ರಿಸ್ತ, ತಮ್ಮ ಚಿಂತನೆಯನ್ನು ಎಂದೂ ಬದಲಾಯಿಸಲಿಲ್ಲ. ನಾನು ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ. ನಾವು ದೂರದ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ನೆಲದ ಮಣ್ಣಿನ ಮಕ್ಕಳ ಬಗ್ಗೆ ನಾವು ಮಾತನಾಡುವುದಿಲ್ಲ. ಪಕ್ಕದ ರಾಜ್ಯದ ಹೊರಾಟಗಳು ದೊಡ್ಡದಾಗಿ ಕಾಣಿಸುತ್ತವೆ. ಚನ್ನವೀರಗೌಡರು ಮಾಡಿರುವ ಸಾಧನೆ ಕರ್ನಾಟಕದ ಅಗ್ರಮಾನ್ಯ ಸಾಧನೆಯಾಗಿದೆ. ಎಂ. ವಿಶ್ವೇಶ್ವರಯ್ಯ ಅವರು ಸಾಧನೆ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಾಗಿದೆ. ಆದರೆ, ಚನ್ನವೀರಗೌಡರ ಸಾಧನೆ ಹೊರ ಬಂದಿಲ್ಲ ಎಂದು ಹೇಳಿದರು.

ವಿದ್ಯಾವರ್ಧಕ ಸಂಘ, ಕೇವಲ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸಂಘ ಅಲ್ಲ, ನಮ್ಮ ನಾಡು, ನುಡಿ ಜಲ ಹಾಗೂ ಬದುಕಿನ ಎಲ್ಲ ವಿಷಯಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದೆ. ಕರ್ನಾಟಕ ಏಕೀಕರಣ ಪ್ರಾರಂಭವಾಗಿರುವುದು ಇಲ್ಲಿಯೇ ಅದರಗುಂಚಿಯ ಶಂಕರಗೌಡರು, ಉಪವಾಸ ಮಾಡಿ ಲಾಠಿ ಚಾರ್ಜ್ ಆಗದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. ಯಶಸ್ಸಿಗೆ ಬಹಳ ಜನ ಅಪ್ಪಂದಿರು ಇರುತ್ತಾರೆ. ಅದ್ಭುತವಾದ ನಾಡು ನಮ್ಮದು, ವಿಜಯನಗರ ಸಾಮಾಜ್ಯ ಆಳಿದ ನಾಡಿದು, ಶ್ರೇಷ್ಠ ಆಡಳಿತಗಾರರು, ಸಾಹಿತಿಗಳು ಆಳಿದ ನಾಡಿದು, ಇಡೀ ಜಗತ್ತಿನಲ್ಲಿಯೇ ನಾವು ವಿಶಿಷ್ಟ ಸ್ಥಾನ ಪಡೆಯಬಹುದು. ಹನ್ನೊಂದನೆ ಶತಮಾನದ ಆರನೇ ವಿಕ್ರಮಾಧಿತ್ಯನ ಆಡಳಿತದ ಕುರಿತು ಒಬ್ಬರು ಬರೆದಿದ್ದಾರೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ ಎಂದು ಹೇಳುತ್ತಾರೆ. ಅಭಿವೃದ್ಧಿ ಇಲಾಖೆ ಕಂದಾಯ ಇಲಾಖೆ, ಮಿಲಿಟರಿಯಲ್ಲಿ ಕೆಲಸ ಮಾಡಿದರೆ ದಂಡನಾಯಕ ಆಗಬಹುದು ಎಂದು ಹೇಳಿದ್ದಾರೆ ಎಂದರು.

ಲಿಂಗಾಯತ ಸಂಸ್ಥೆಯನ್ನು ಕಟ್ಟಿದವರು ಎಲ್ಲರೂ ವಿದ್ಯಾವಂತರಾಗಿರಲಿಲ್ಲ. ಅವರ ಮಕ್ಕಳು ವಿದ್ಯಾವಂತರಾಗುತ್ತಾರೆ ಎಂಬ ಉದ್ದೇಶದಿಂದ ಕಟ್ಟಿದರು. ಲಿಂಗಾಯತ ಸಂಸ್ಥೆ, ಮುರುಗಾ ಮಠ ಈ ” ಭಾಗದಲ್ಲಿ ಇರದಿದ್ದರೆ ನಾವೆಲ್ಲ ವಿದ್ಯಾವಂತರಾಗಲು ಸಾಧ್ಯವಿರಲಿಲ್ಲ. ಚನ್ನವೀರಗೌಡರ ಬಗ್ಗೆ ಬಂದಿರುವ ಈ ಪುಸ್ತಕ ಸಮಯೋಚಿತವಾಗಿದೆ. ಸಿ.ಎಸ್. ಪಾಟೀಲ್ ಅವರು ಇಂದಿನ ವ್ಯವಸ್ಥೆಗೆ ಅಪವಾದ, ಅಂದರೆ ಅವರ ಘನತೆ ಕಡಿಮೆಯಾಗಲಿಲ್ಲ. ವ್ಯವಸ್ಥೆ ಅಷ್ಟು ಅಧೋಗತಿಗೆ ಹೋಗಿದೆ. ಅವರು ಅಷ್ಟೊಂದು ಪ್ರಾಮಾಣಿಕ, ವ್ಯಕ್ತಿ, ಅವರು ಪವರ್ ಪೊಲಿಟಿಕ್ಸ್ ಮಾಡಿದ್ದರೆ ಎಲ್ಲಿಯೋ ಹೋಗುತ್ತಿದ್ದರು. ಆದರೆ, ಅವರು ಸೈದಾಪುರ ಗೌಡರಾಗಿಯೇ ಉಳಿದಿದ್ದಾರೆ. ಅವರು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿ. ಅವರು ಹೋರಾಟವನ್ನು ಹುಡುಕಿಕೊಂಡು ಹೋಗುವವರು. ಬಹಳ ಸ್ನೇಹ ಜೀವಿ, ಜೀವಕ್ಕೆ ಜೀವ ಕೊಡುವವರು, ಹಗಲು ರಾತ್ರಿ ಎನ್ನದೇ ಎಲ್ಲರ ಜೊತೆಗೆ ನಿಲ್ಲುತ್ತಿದ್ದರು.

ಒಂದು ಶಿಸ್ತು, ಪರಂಪರೆಯಿಂದ, ಹಿರಿಯ ಸಾಧನೆಯ ಪ್ರೇರಣೆಯಿಂದ ಬಂದಿದ್ದರಿಂದ ಸೈದಾಪುರ ಗೌಡರು ಏನು ಗಳಿಸಿದ್ದರೊ, ಅವರ ಮರಿಮೊಮ್ಮಗ ಅದನ್ನು ಉಳಿಸಿಕೊಂಡು ಹೊರಟಿದ್ದಾರೆ. ವಿದ್ಯಾವರ್ಧಕ ಸಂಘ ಏನೇ ಹೋರಾಟ ರೂಪಿಸಿದರೂ, ನಾನು ನಿಮ್ಮ ಜೊತೆಗೆ ಇರುತ್ತೇನೆ. ಧಾರವಾಡದ ಅಂತಸತ್ವ ಆತ್ಮೀಯತೆ. ಪ್ರೀತಿ, ವಿಶ್ವಾಸ, ಅಂತಕರಣ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಿದೆ. ಸಿ.ಎಸ್. ಪಾಟೀಲರು ಕೆಸರಿನಲ್ಲಿ ಅರಳಿದ ಕಮಲ ಇದ್ದ ಹಾಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿ.ಐ. ಪಾಟೀಲ್, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ರಾಜ್ಯದ `ಕಾರ್ಮಿಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ‘ಸರ್ಕಾರಿ ಸ್ವತ್ತು’ ಕುರಿತ ಈ ಅಪರಾಧಗಳಿಗೆ ಶಿಕ್ಷೆ, ದಂಡವೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

SHOCKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಟ್ಟಡ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪಾಪಿ ಪತ್ನಿ

17/11/2025 4:39 PM1 Min Read

BIG NEWS : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಸೋದರಮಾವನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ!

17/11/2025 4:28 PM1 Min Read

ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಪ್ರತಿಪಕ್ಷ ನಾಯಕ ಆರ್‌.ಅಶೋಕ

17/11/2025 4:24 PM1 Min Read
Recent News

SHOCKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಟ್ಟಡ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪಾಪಿ ಪತ್ನಿ

17/11/2025 4:39 PM

BREAKING : ಬಿಹಾರ ವಿಧಾನಸಭೆ ವಿಪಕ್ಷ ನಾಯಕರಾಗಿ ‘ತೇಜಸ್ವಿ ಯಾದವ್’ ಆಯ್ಕೆ

17/11/2025 4:36 PM

ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತೇಜಸ್ವಿ ಯಾದವ್ ಆಯ್ಕೆ

17/11/2025 4:32 PM

BREAKING : ಸೌದಿ ಅರೇಬಿಯಾ ಬಸ್ ಅಪಘಾತ : 45 ಭಾರತೀಯ ಯಾತ್ರಿಕರು ಸಾವು ದೃಢ ; ಒರ್ವ ಬಚಾವ್

17/11/2025 4:29 PM
State News
KARNATAKA

SHOCKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಟ್ಟಡ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪಾಪಿ ಪತ್ನಿ

By kannadanewsnow0917/11/2025 4:39 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಕಟ್ಟಡದ ಮೇಲಿನಿಂದ ಪತಿಯನ್ನು ತಳ್ಳಿ, ಪತ್ನಿಯೊಬ್ಬರು ಕೊಲೆಗೈದ ಘಟನೆ ನಡೆದಿದೆ. ಬೆಂಗಳೂರಿನ…

BIG NEWS : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಸೋದರಮಾವನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ!

17/11/2025 4:28 PM

ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಪ್ರತಿಪಕ್ಷ ನಾಯಕ ಆರ್‌.ಅಶೋಕ

17/11/2025 4:24 PM

ಶಿವಮೊಗ್ಗ: ಅಲ್ಪಸಂಖ್ಯಾತ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು- ಶಾಸಕ ಗೋಪಾಲಕೃಷ್ಣ ಬೇಳೂರು

17/11/2025 4:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.