ನವದೆಹಲಿ : ದೆಹಲಿಯಲ್ಲಿ ಭಾನುವಾರ 20 ವರ್ಷದ ಯುವತಿಯೊಬ್ಬಳ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು, ಆಕೆಯ ಬಟ್ಟೆ ಕಾರಿಗೆ ಸಿಲುಕಿದ ಪರಿಣಾಮ ಸುಮಾರು 12 ಕಿಮೀ ವರೆಗೆ ಕಾರು ಎಳದೊಯ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಕುರಿತಂತೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದೆ. ಇತ್ತ ಯುವತಿಯ ಕುಟುಂಬ ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದೇಳಿದೆ.
ಈ ಘಟನೆ ಭಾನುವಾರ ಸುಲ್ತಾನ್ಪುರಿಯ ರಾಷ್ಟ್ರೀಯ ರಾಜಧಾನಿಯ ಕಾಂಜವಾಲಾ ಪ್ರದೇಶದಲ್ಲಿ ನಡೆದಿದೆ.
ಈ ಕುರಿತಂತೆ ಎಎನ್ಐ ಜೊತೆ ಮಾತನಾಡಿರುವ ಮೃತ ಯುವತಿಯ ತಾಯಿ, ನಾನು ಮಗಳೊಂದಿಗೆ ರಾತ್ರಿ 9 ರ ಸುಮಾರಿಗೆ ಮಾತನಾಡಿದ್ದೆ. ಅವಳು ಮುಂಜಾನೆ 3-4 ರ ಹೊತ್ತಿಗೆ ಹಿಂದಿರುಗುತ್ತೇನೆ ಎಂದೇಳಿದ್ದಳು. ನನ್ನ ಮಗಳು ಮದುವೆಗಳಿಗಾಗಿ ಈವೆಂಟ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಮುಂಜಾನೆ ಪೊಲೀಸರು ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ತಿಳಿದು ಆಘಾತವಾಯಿತು ಎಂದೇಳಿದ್ದಾರೆ.
Delhi | I had a conversation with her at around 9pm, she said she'll return by 3-4am. She used to work as event planner for weddings. In morning,I got a call from police & was informed about the accident. I was taken to police station & was made to wait: Deceased's mother https://t.co/yGrjnk3sKO pic.twitter.com/8KPld7ERjC
— ANI (@ANI) January 2, 2023
ಇದೇ ವೇಳೆ ಯುವತಿಯ ತಾಯಿ, ಮಗಳನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಮಗಳೊಬ್ಬಳೆ ನಮ್ಮ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದಳು. ಅವಳೆ ಆಧಾರಸ್ತಂಭವಾಗಿದ್ದಳು, ಅಪಘಾತದಲ್ಲಿ ಅವಳ ದೇಹದ ಮೇಲೆ ಒಂದೇ ಒಂದು ಬಟ್ಟೆ ಇರಲಿಲ್ಲ ಎಂದೇಳಿದ್ದು, ಅದು ಯಾವ ರೀತಿಯ ಅಪಘಾತವಾಗಿದೆ ಎಂದು ಊಹಿಸಲಾಗುತ್ತಿಲ್ಲ ಎಂದು ನೊಂದು ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ತೀವ್ರವಾಗಿ ಖಂಡಿಸಿದ್ದು, ಈ ದುರಂತದಿಂದ ನಾನು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
When my brother arrived at PS, he was told about death of my daughter. My brother told me about it. My daughter was only person earning in our family.She was wearing so many clothes but not single piece of cloth was there on her body,what kind of accident was it:Deceased's mother pic.twitter.com/lWyGkJa522
— ANI (@ANI) January 2, 2023
ಭಾನುವಾರ ಬೆಳಿಗ್ಗೆ ಕಂಝಾವ್ಲಾ-ಸುಲ್ತಾನ್ಪುರಿಯಲ್ಲಿ ನಡೆದ ಅಮಾನವೀಯ ಘಟನೆಯಿಂದ ನಾನು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ದೆಹಲಿಯ ಪೊಲೀಸ್ ಆಯುಕ್ತರು ಹೆಚ್ಚನ ನಿಗಾ ವಹಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಗವರ್ನರ್ ಟ್ವೀಟ್ ಮಾಡಿದ್ದಾರೆ.
ಸಂತ್ರಸ್ತೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ/ಸಹಾಯ ಮಾಡಲಾಗುವುದು. ಹೆಚ್ಚು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ಸಮಾಜಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
BIGG NEWS : ಕಾರ್ಕಳದಲ್ಲಿ ಶಾಲಾ ಪ್ರವಾಸಕ್ಕೆ ತೆರಳಿದ ಬಸ್ ಪಲ್ಟಿ : ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಾಯ
BIGG NEWS : 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಹಾವೇರಿಯ ಪಿಯು ಕಾಲೇಜುಗಳಿಗೆ ರಜೆ ಘೋಷಣೆ