ಬೆಂಗಳೂರು : ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಎಕ ಗಂಟೆ ಆಗಿ ಪರಿಣಮಿಸುತ್ತಿತ್ತು. ಇದೀಗ ಕಾಂಗ್ರೆಸ್ ಹೊಸ ಅಭ್ಯರ್ಥಿಯಾದ ಕೆ ವಿ ಗೌತಮ್ಗೆ ಮನೆ ಹಾಕಿದೆ ಈ ಕುರಿತಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಹೊಸ ಮುಖ ಗೌತಮಗೆ ಅವಕಾಶವನ್ನು ನೀಡಿದ್ದೇವೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೇಟ್ ವಿಚಾರವಾಗಿ ಸಾ ಕೆ ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಜೊತೆ ನಾನು ಚರ್ಚಿಸಿದ್ದೇನೇ. ಅವರವರ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ಅವರವರ ಸ್ವಾರ್ಥಕ್ಕಾಗಿ ಅವರು ಹೇಳಿದ್ದಾರೆ. ಎರಡು ಗುಂಪಿಗೂ ನಾವು ಅವಕಾಶ ಕೊಡುವುದಿಲ್ಲ ಎಂದು ಅವರು ತಿಳಿಸಿದರು.ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಆಗುವುದಿಲ್ಲ ಸೀಟು ಗೆಲ್ಲೋದು ಬಿಡುವುದು ಅನಂತರ ಪಕ್ಷದಲ್ಲಿ ಮೊದಲು ಶಿಸ್ತು ಬಹಳ ಮುಖ್ಯ ಯಾರೇ ಸಿಕ್ತು ಉಳ್ಳಂಗಿಸಿದರು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯಾಗಿ ಗುಂಪು ರಾಜಕಾರಣ ಇಲ್ಲಿಲ್ಲ. ನಮ್ಮಲ್ಲಿ ಶಿಸ್ತು ಮುಖ್ಯವಾಗಿರುತ್ತದೆ. ರಾಜ್ಯದ ಹಿತಕ್ಕೆ ಪಕ್ಷದ ಹಿತವನ್ನು ಗಮನವಿಟ್ಟುಕೊಂಡು ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ಮಂತ್ರಿಗಳು ಆಗಿರಲಿ ಯಾವುದೇ ಶಾಸಕ ಸಚಿವರು ಇರಲಿ ಎಲ್ಲರಿಗೂ ಹೇಳುತ್ತಿದ್ದೇನೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತಾರೆ ಅವರಿಗೆ ಬೆಂಬಲಿಸಿ.ನಿಮ್ಮ ಗುಂಪುಗಾರಿಕೆ ಮುಖ್ಯ ಅಲ್ಲ ಇದು ಪಕ್ಷ ಮುಖ್ಯ ಎಲ್ಲರಿಗೂ ಮಾತನಾಡಿದ್ದೇನೆ ಇಷ್ಟು ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.