ಶಿವಮೊಗ್ಗ : ಕರಾವಳಿ ಭಾಗದ ಶಿಕ್ಷಕರಿಗೆ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದು, ಕಲ್ಲೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಈ ಕುರಿತು ಹೇಳಿಕೆ ನೀಡಿದ್ದು ಕರಾವಳಿ ಭಾಗದ ಕೆಲವು ಶಾಲೆಗಳ ಶಿಕ್ಷಕರು ದಾರಿತಪ್ಪುತ್ತಿದ್ದಾರೆ.ದಾರಿ ತಪ್ಪಿದ ಶಿಕ್ಷಕರನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿದ್ದೇವೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕೆ ಹೊರತು ಆಟವಾಡಬಾರದು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ 50 ರೂಪಾಯಿ ವಸುಲಿ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಶುಲ್ಕ ವಸೂಲಿ ಶುಲ್ಕ ಆರಂಭವಾಗಿದೆ ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ನಿಗದಿಯಾಗಿತ್ತು ನಾವು ಹತ್ತು ರೂಪಾಯಿಯನ್ನು ಕಡಿಮೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯಲ್ಲಿ ಮುಸ್ಲಿಂರಿಗೆ ತುಷ್ಟೀಕರಣ ಆರೋಪ ಕೇಳಿಬಂದಿದ್ದು, ಫೆಬ್ರವರಿ 26 ರಿಂದ ಮಾರ್ಚ್ 3 ರವರಿಗೆ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10.15 ಕ್ಕೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ.
ಮಾರ್ಚ್ 1 ಶುಕ್ರವಾರ ವಿಜ್ಞಾನ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ನಮಾಜ್ ಗೆ ಅನುಕೂಲ ಮಾಡಿಕೊಡಲು ಪಟ್ಟಿ ಬದಲಾವಣೆ ಆರೋಪ ಕೇಳಿ ಬಂದಿದ್ದು, ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯಲ್ಲಿ ತುಷ್ಟಿ ಕರ್ಣ ಆರೋಪ ಹೇಳಿ ಬಂದಿದೆ.
ನಮಾಜಿಗೆ ಅನುಕೂಲ ಮಾಡಿಕೊಳ್ಳಲು ಮಧ್ಯಾಹ್ನ ಪರೀಕ್ಷೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷೆ ಹಾಗು ಮೌಲ್ಯ ನಿರ್ಣಯ ಮಂಡಳಿಯ ಗಮನಕ್ಕೆ ಬಂದಿದೆ. ಸಮಾಜಿಕ ಜಾಲತಾಣದಲ್ಲಿ ಚರ್ಚೆ ಹಿನ್ನೆಲೆಯಲ್ಲಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ಮುಸ್ಲಿಂರ ಯಾವುದೇ ತುಷ್ಟಿಕಾರಣ ಇಲ್ಲ ಎಂದು ಸ್ಪಷ್ಟನೆ ನೀಡಿದೆ.