ಹಾಸನ: ಭಾರತ ಮತ್ತು ಪಾಕ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಆಪರೇಷನ್ ಸಿಂಧೂರ್ ಗೆ ಪ್ರತಿಯಾಗಿ ನಿನ್ನೆಯಿಂದ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇಂತಹ ದಾಳಿಯನ್ನು ಭಾರತೀಯ ಸೇನೆ ಅಷ್ಟೇ ತೀವ್ರವಾಗಿ ಪ್ರತ್ಯುತ್ತರ ನೀಡಿ ವಿಫಲಗೊಳಿಸುತ್ತಿದೆ. ಇದರ ನಡುವೆ ಭಾರತೀಯ ಸೇನೆಗೆ ಬಲ ತುಂಬಲು ನಾವು ಸಿದ್ಧ ಎಂಬುದಾಗಿ ನಿವೃತ್ತ ಯೋಧರು ಬೆಂಬಲ ಸೂಚಸಿಸಿದ್ದಾರೆ.
ಈ ಸಂಬಂಧ ಹಾಸನದ ಉದಯಗಿರಿ ಬಡಾವಣೆಯಲ್ಲಿನ ಸೈನಿಕರ ಭವನದಲ್ಲಿ ತುರ್ತು ಸಭೆಯನ್ನು ನಿವೃತ್ತ ಯೋಧರು ನಡೆಸಿದರು. ಈ ಸಭೆಯಲ್ಲಿ ಕರೆ ಬಂದರೇ ಸೇವೆ ಸಲ್ಲಿಸಲು ಸಿದ್ಧರಾಗುವಂತ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ಮೂಲಕ ಭಾರತೀಯ ಸೇನೆಗೆ ಬಲ ತುಂಬಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ.