ಹಾಸನ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ನಿಂತಿರುವುದು ಶ್ರೇಯಸ್ ಪಟೇಲ್ ಅಲ್ಲ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್. ಹೆದರಿ ಓಡುವ ಮಕ್ಕಳು ನಾನಲ್ಲ ಈ ಬಾರಿ ಹಾಸನ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲರನ್ನು ಗೆಲ್ಲಿಸಿ ಎಂದು ಡಿಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು.
ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ವಾ? : ಇಲ್ಲಿದೆ ಯದುವೀರರ ಸಂಪೂರ್ಣ ಆಸ್ತಿ ವಿವರ
ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಒಂದೇ ಕುಟುಂಬದಿಂದ 3 ಸ್ಪರ್ಧಿಸಿದ್ದಾರೆ ಯಾರು ಇರಲಿಲ್ಲ. ಹಾಸನದಲ್ಲಿ ದೇವೇಗೌಡರ ಮೊಮ್ಮಗ, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಳಿಯನನ್ನು ನಿಲ್ಲಿಸಿದ್ದಾರೆ.ಜೆಡಿಎಸ್ ಬಲಿಷ್ಠವಾಗಿದ್ದರೆ ದಳದ ಚಿನ್ಹೆ ಮೇಲೆ ಅಳಿಯನ ನಿಲ್ಲಿಸುತ್ತಿದ್ದರು ಈಗ ಜೆಡಿಎಸ್ ಶಕ್ತಿ ಹೊರಟುಹೋಗಿದೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ರಾಮ, ಕೃಷ್ಣ, ‘ಪ್ರಧಾನಿ’ ಕುರಿತ ಪುಸ್ತಕಗಳಿಗೆ ಅರವಿಂದ್ ಕೇಜ್ರಿವಾಲ್ ಆಗ್ರಹ
ಸರ್ಕಾರ ಬಿಳಿಸಿದವರ ಜೊತೆ ಎಚ್. ಡಿ ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿದ್ದಾರೆ. ಆಗ ನಾವು ಸರ್ಕಾರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ನಾನು ಹಾಸನದಲ್ಲಿ ನಿಂತು ಹೇಳುತ್ತೇನೆ ಹೆದರಿ ಓಡುವ ಮಕ್ಕಳು ನಾವಲ್ಲ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನನಗೆ ‘ಗರ್ವನೆ’ ಇಲ್ಲ ಅವರೇನು ನನ್ನ ‘ಗರ್ವಭಂಗ’ ಮಾಡೋದು : HD ದೇವೇಗೌಡಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಹಾಸನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಶ್ರೇಯಸ್ ಪಟೇಲ್ ಅಲ್ಲ ಖರ್ಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಿದ್ದಾರೆ.ಹಾಸನ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲರನ್ನು ಗೆಲ್ಲಿಸಿ ಈ ಬಾರಿ ಬಿಜೆಪಿ ಕಾರ್ಯಕರ್ತರು ನಾಯಕರು ಕಾಂಗ್ರೆಸ್ ಬೆಂಬಲಿಸಿ ಹಾಸನದಲ್ಲಿ ರೋಡ್ ಶೋ ವೇಳೆ ಡೀಸೆಮ್ ಡಿಕೆ ಶಿವಕುಮಾರ್ ಮನವಿ ಮಾಡಿದರು.