ಬೆಂಗಳೂರು : ನಮ್ಮ ಸರ್ಕಾರ ಎಲ್ಲಾ ಸಮಾಜ ಹಾಗೂ ಎಲ್ಲಾ ಸಮುದಾಯದ ಪರ ನಿಲ್ಲುತ್ತದೆ. ಜನರಿಗೆ ಅನುಕೂಲವಾಗಲಿ ಎಂದು ಗ್ಯಾರಂಟಿ ಯೋಜನೆ ತಂದಿದೆ. ಚುನಾವಣೆಯ ವೇಳೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಾವು ರಾಜಕಾರಣ ಮಾಡುತ್ತಿರುವುದು ಭಾವನೆಯ ಮೇಲೆ ಅಲ್ಲ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅರ್ಚಕರ ಬೃಹತ್ ಸಮಾವೇಶ ನಡೆಯುತ್ತಿದ್ದು ಈ ಒಂದು ಸಮಾವೇಶದಲ್ಲಿ ಮಾತನಾಡಿದ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರು ಗಣಪತಿಯನ್ನು ನೆನಪಿಸಿಕೊಂಡಿದ್ದಾರೆ. ಜೋರು ಮಳೆ ಬರುತ್ತಿದ್ದರು ಕೂಡ ಚಳ್ಳಕೆರೆಯಿಂದ ಓಡೋಡಿ ಬಂದೆ.ಈ ದೇಶಕ್ಕೆ ಆಸ್ತಿ ಅಂದರೆ ನಮ್ಮ ಸಂಸ್ಕೃತಿ. ದೇವರಿಗೆ ಪೂಜೆ ಸಲ್ಲಿಸುವ ಭಾಗ್ಯ ಅರ್ಚಕರಿಗೆ ಕೊಟ್ಟಿದ್ದಾನೆ ಎಂದು ಅರ್ಚಕರ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ನಾವು ಕಲ್ಲಿನಲ್ಲೇ ದೇವರನ್ನು ಕಾಣುತ್ತೇವೆ. ಪೂಜಿಸಲು ಜಾತಿ ಬೇಕಾಗಿಲ್ಲ. ಧರ್ಮದಲ್ಲಿ ಯಾರನ್ನು ಟೀಕಿಸಬಾರದು ಎಂದು ಹೇಳುತ್ತಾರೆ. ಮುಜರಾಯಿ ಇಲಾಖೆಯ ಸಚಿವರು ಅನೇಕ ಯೋಜನೆ ತಂದಿದ್ದಾರೆ. ಬಿಜೆಪಿಯವರು ರಾಜಕಾರಣಕ್ಕಾಗಿ ದೇವರನ್ನು ತರುತ್ತಿದ್ದಾರೆ ಎಂದು ಬಿಜೆಪಿಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.