ಚೆನ್ನೈ: ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಉಂಟಾಗಿದೆ. ಈವರೆಗೆ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 240ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ವೇಳೆಯಲ್ಲಿ ಪರಿಹಾರ ಕಾರ್ಯಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು 5 ಕೋಟಿ ನೆರವು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಎಎನ್ಎ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ತಮಿಳುನಾಡು ಸರ್ಕಾರದಿಂದ ಪರಿಹಾರ ಕಾರ್ಯಗಳಿಗಾಗಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶಿಸಿದ್ದಾರೆ ಎಂದಿದೆ.
CM MK Stalin also ordered to release Rs 5 crores for relief measures to Kerala Government from Tamil Nadu government from CM General funds From Tamil Nadu, 20 fighters from the Fire rescue department headed by its Joint Director, 20 fighters from the State Disaster Management…
— ANI (@ANI) July 30, 2024
ತಮಿಳುನಾಡಿನಿಂದ ಸಿಎಂ ಜನರಲ್ ನಿಧಿಯಿಂದ, ಜಂಟಿ ನಿರ್ದೇಶಕರ ನೇತೃತ್ವದ ಅಗ್ನಿಶಾಮಕ ರಕ್ಷಣಾ ಇಲಾಖೆಯ 20 ಫೈಟರ್ ಗಳು, ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 20 ಫೈಟರ್ ಗಳು, 10 ವೈದ್ಯರು ಮತ್ತು ನರ್ಸ್ ಗಳನ್ನು ಒಳಗೊಂಡ ಒಂದು ವೈದ್ಯಕೀಯ ತಂಡ ಇಂದು ಕೇರಳಕ್ಕೆ ಧಾವಿಸುತ್ತಿದೆ.
BREAKING: ಕರ್ನಾಟಕಕ್ಕೆ ಬಿಗ್ ರಿಲೀಫ್: ಮುಂದಿನ ಸಭೆಯಲ್ಲಿ ‘ಕಾವೇರಿ ನದಿ ನೀರು’ ಹರಿವಿನ ಬಗ್ಗೆ ಅವಲೋಕವೆಂದ ‘CWRC’
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’