ಕೇರಳ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದು ಇದೀಗ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 246 ಕ್ಕೆ ಏರಿಕೆಯಾಗಿದೆ. ಈ ಮಧ್ಯ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ಬಾಲಕನೋರ್ವ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾನೆ.
ಹೌದು ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 246ಕ್ಕೆ ಏರಿದೆ. ದುರಾದೃಷ್ಟ ಎಂಬಂತೆ ಸಂಬಂಧಿಕರ ಮನೆಗೆ ಹೋಗಿದ್ದ ಕರ್ನಾಟಕದ ಕೊಡಗಿನ ರೋಹಿತ್ (9) ಬಾಲಕ ವಯನಾಡ್ ಗುಡ್ಡ ಕುಸಿತದಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಮೃತ ಬಾಲಕ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗುಯ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ.
ಶಾಲೆಗೆ ರಜೆ ಹಿನ್ನಲೆ ಕೇರಳ ರಾಜ್ಯದ ಮೇಪಾಡಿಯದ ಸಂಬಂಧಿಕರ ಮನೆಗೆ ತಾಯಿಯ ಜೊತೆ ಮೃತ ರೋಹಿತ್ ಹೋಗಿದ್ದ. ದುರಾದೃಷ್ಟ ಎಂಬಂತೆ ವಯನಾಡ್ನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿದೆ. ಕಾರ್ಯಾಚರಣೆ ವೇಳೆ ರೋಹಿತ್ ಮೃತದೇಹ ಮಣ್ಣಿನ ಅಡಿಯಲ್ಲಿ ಪತ್ತೆಯಾಗಿದ್ದು, ತಾಯಿ ಕವಿತಾ ಎಂಬುವವರ ಮೊಬೈಲ್ ಕೂಡ ಸ್ವಿಚ್ಚ ಆಫ್ ಆಗಿದೆ.