ಚಾಮರಾಜನಗರ: ವಯನಾಡಿನ ಟೀ ಎಸ್ಟೇಟ್ ಒಂದರಲ್ಲಿ ಕೆಲಸಕ್ಕೆ ಇದ್ದಂತ 6 ಕನ್ನಡಿಗರು ಭೂ ಕುಸಿತದ ನಂತ್ರ, ಬದುಕುಳಿದಿದ್ದರು. ಅವರು ಇಂದು ರಾಜ್ಯಕ್ಕೆ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಮ ಹಾಗೂ ಕೋಡಹಳ್ಳಿ ಗ್ರಾಮ 6 ಮಂದಿ ಕೇರಳದ ವಯನಾಡಿ ಚೋರಲ್ ಮಾಲಾ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡು ಇದ್ದರು. ವಯನಾಡು ಭೂ ಕುಸಿತದ ದುರಂತದಿಂದ ಪಾರಾದಂತ ಅವರು, ಕಾಳಜಿ ಕೇಂದ್ರದಲ್ಲಿದ್ದರು.
ವಯನಾಡಿನ ಭೂ ಕುಸಿತದಲ್ಲಿ ದುರಂತದಿಂದ ಪಾರಾಗಿ ಬಂದಂತ 6 ಕನ್ನಡಿಗರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವಂತ ಎಲ್ಲಾ ಕೆಲಸವನ್ನು ಸರ್ಕಾರ ಮಾಡಿತ್ತು. ಈ ಹಿನ್ನಲೆಯಲ್ಲಿ ಇಂದು ಮೇಪ್ಪಾಡಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಂತ ಮಂಗಲ ಗ್ರಾಮದ ಜಯಶ್ರೀ, ಮಂಜುಳಾ, ಸಿದ್ದರಾಜು ಹಾಗೂ ಕೋಡಹಳ್ಳಿ ಗ್ರಾಮದ ನಾಗಶೆಟ್ಟಿ, ಗೌರಮ್ಮ ಮತ್ತು ದಿವ್ಯಾ ಸೇರಿದಂತೆ 6 ಮಂದಿಯನ್ನು ಚಾಮರಾಜನ ನಗರಕ್ಕೆ ಸುರಕ್ಷಿತವಾಗಿ ವಾಪಾಸ್ ಕರೆತರಲಾಗಿದೆ.
ಇದಷ್ಟೇ ಅಲ್ಲದೆ ಚಾಮರಾಜನಗರ ಜಿಲ್ಲಾಡಳಿತ, ಗುಂಡ್ಲುಪೇಟೆ ತಾಲ್ಲೂಕು ಆಡಳಿತದ ಅಧಿಕಾರಿಗಳು 6 ಮಂದಿಯನ್ನು ಅವರವರ ಸ್ವಗ್ರಾಮಗಳಿಗೆ ಬಿಟ್ಟು ಬಂದಿದ್ದಾರೆ.
ಸಿಎಂಗೆ ನೀಡಿರುವ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ: DKS
‘HSRP’ ನಂಬರ್ ಪ್ಲೇಟ್ ಬುಕಿಂಗ್ ವೇಳೆ ಇರಲಿ ಎಚ್ಚರ : ಸೈಬರ್ ವಂಚಕರಿಂದ 95 ಸಾವಿರ ರೂ. ಕಳೆದುಕೊಂಡ ವ್ಯಕ್ತಿ!