ಬೆಂಗಳೂರು : ಬೆಂಗಳೂರಿನಲ್ಲಿ (ಶನಿವಾರ ನ.26) ಇಂದು ನೀರು ಫೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಭಾಗಗಳಲ್ಲಿ ನೀರಿನ ಕೊಳವೆಗೆ ಇಎಂಎಫ್ ಮೀಟರ್ ಅಳವಡಿಸುವ ಕಾಮಗಾರಿ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶನಿವಾರದಂದು ಬೆಳಗ್ಗೆ 10 ರಂದು ಸಂಜೆ 6 ಗಂಟೆವರೆಗೂ ಕಾವೇರಿ ನೀರು ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.
ಎಲ್ಲೆಲ್ಲಿ ವ್ಯತ್ಯಯ
ಶಿವಾಜಿನಗರ, ಇನ್ ಫೆಂಟ್ರಿರಸ್ತೆ, ಅಲಿ ಆಸ್ಕರ್ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ ಮತ್ತು ಚನ್ನಬಸಪ್ಪ ಉದ್ಯಾನ, ಕುಂಬಾರ್ ಪೇಟೆ ಹಲವು ಭಾಗದಲ್ಲಿ ನೀರು ವ್ಯತ್ಯಯವಾಗಲಿದೆ. ಕಾಮರಾಜ ರಸ್ತೆ, ಪೀರಪಿಳೈ ರಸ್ತೆ, ಸೇಂಟ್ ಮಾಕ್ಸ್ ರಸ್ತೆ, ಧರ್ಮರಾಯ ಸ್ವಾನಿ ದೇವಾಲಯ ವಾರ್ಡ್, ಕೆ ಆರ್ ಮಾರುಕಟ್ಟೆ ಹಾಗೂ ವಿಧಾನಸೌಧ, ವಿಕಾಸಸೌಧ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.
‘ಶಿಷ್ಯರನ್ನು ಬಳಸಿಕೊಂಡು ಕುತಂತ್ರ ಮಾಡುವುದು ಸಿದ್ದು ತಂತ್ರ’ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ
BIGG NEWS : ಎಲ್ಲಾ ವಿಶ್ವವಿದ್ಯಾಲಯ, ಪದವಿ ಕಾಲೇಜುಗಳಲ್ಲಿ ‘ಧ್ಯಾನ’ ಕಡ್ಡಾಯ : ‘UGC’ ಆದೇಶ