ಕಲಬುರಗಿ: ಮಹಾರಾಷ್ಟ್ರದ ವೀರ್ ಜಲಾಶಯದಿಂದ ಭೀಮಾ ನದಿಗೆ 1.20 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ . ಹೀಗಾಗಿ ಕಲಬುರಗಿ ಭೀಮಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೂಚಿಸಿದ್ದಾರೆ.
BIGG BREAKING NEWS: ಕಲಬುರ್ಗಿಯಲ್ಲಿ ತಳವಾರ ಸಮುದಾಯದವರಿಂದ ಸಿಎಂ ಬೊಮ್ಮಾಯಿಗೆ ಕಪ್ಪು ಪ್ರದರ್ಶನ
ಸದ್ಯ ಭೀಮಾ ನದಿಯ ಅಕ್ಕಪಕ್ಕದ ಗ್ರಾಮಗಳಿಗೆ ಯಾವುದೇ ರೀತಿಯ ಪ್ರವಾಹ ಉಂಟಾಗುವುದಿಲ್ಲ.ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪೂರ ಹಾಗೂ ಕಲಬುರಗಿ ತಾಲೂಕಿನ ಜನರು ಭೀಮಾ ನದಿ ತೀರ ಹಾಗೂ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಕಡೆಗೆ ಹೋಗಬಾರದು. ಜಾನುವಾರುಗಳನ್ನು ಸಹ ಬಿಡದಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.ಅಲ್ಲದೆ, ಈ ನೀರಿನಿಂದ ಏನಾದರೂ ಸಮಸ್ಯೆ ಕಂಡುಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 08472-278605ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.