ಆಗ್ರಾ : ಆಗ್ರಾದ ಹೋಟೆಲ್ ಒಂದರಲ್ಲಿ ಪತಿ-ಪತ್ನಿಯ ಹೈವೋಲ್ಟೇಜ್ ಡ್ರಾಮಾ ನಡೆದಿದೆ. ಗೆಳಗಿಯ ಜೊತೆ ಪತಿ ಹೋಟೆಲ್ ಕೋಣೆಯೊಳಗೆ ರಾಸಲೀಸೆ ನಡೆಸುವಾಗ ರೆಡ್ ಹ್ಯಾಂಡ್ ಆಗಿ ಗಂಡ ಸಿಕ್ಕಿ ಬಿದ್ದಿದ್ದಾನೆ. ನಂತ್ರ ಕೋಪಕೊಂಡ ಪತ್ನಿ ತನ್ನ ಗಂಡನನ್ನ ಚಪ್ಪಲಿಯಿಂದ ಹೊಡೆದಿದ್ದು, ಸಧ್ಯ ಈ ಗಲಾಟೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ತನ್ನ ಗೆಳತಿಯೊಂದಿಗೆ ಹೋಟೆಲ್ ತಲುಪಿದ ಪತಿ.!
ಠಾಣಾ ಹರಿ ಪರ್ವತ ಪ್ರದೇಶದ ಹೋಟೆಲ್’ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಹೋಟೆಲ್ ತಲುಪಿದನು. ಅವನ ಹೆಂಡತಿಗೆ ಎಲ್ಲಿಂದಲೋ ಈ ವಿಷಯ ತಿಳಿದಿದ್ದು, ಹೆಂಡತಿ ತನ್ನ ಸಹೋದರನೊಂದಿಗೆ ಹೋಟೆಲ್’ಗೆ ಹೋಗಿ ಗಲಾಟೆ ಶುರು ಮಾಡಿದ್ದಾಳೆ. ಹೆಂಡತಿ ತನ್ನ ಪತಿ ಮತ್ತು ಅವನ ಗೆಳತಿಯನ್ನ ಚಪ್ಪಲಿಯಿಂದ ಹೊಡೆದಿದ್ದು, ಹೋಟೆಲ್ ನಲ್ಲಿ ಈ ಹೈವೋಲ್ಟೇಜ್ ಡ್ರಾಮಾ ದೀರ್ಘಕಾಲದವರೆಗೆ ಮುಂದುವರಿಯಿತು.
ಆರೋಪಿಯು 16 ವರ್ಷದ ಮಗಳ ತಂದೆ.!
ಮಾಹಿತಿಯ ಪ್ರಕಾರ, ಮಹಿಳೆಯ ಪತಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 16 ವರ್ಷದ ಮಗಳು ಕೂಡ ಇದ್ದಾಳೆ. ಗಂಡನ ಕೃತ್ಯಗಳಿಂದ ಬೇಸತ್ತ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಾಳೆ. ವೈರಲ್ ವೀಡಿಯೊದಲ್ಲಿ, ಪತ್ನಿ ತನ್ನ ಪತಿ ಮತ್ತು ಅವನ ಗೆಳತಿಯನ್ನ ಚಪ್ಪಲಿಯಿಂದ ಹೊಡೆಯುವುದನ್ನು ಕಾಣಬಹುದು. ಪತಿ ಕ್ಷಮೆಯಾಚಿಸುತ್ತಲೇ ಇದ್ದನು, ಆದರೆ ಹೆಂಡತಿ ಆತನನ್ನ ಹೊಡೆಯುವುದನ್ನ ಮುಂದುವರಿಸಿದಳು… ಘಟನೆಯ ಸಮಯದಲ್ಲಿ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದರು.
ವಿಡಿಯೋ ಇಲ್ಲಿದೆ.!
#WATCH उत्तर प्रदेश: आगरा में होटल के कमरे में दूसरी महिला के साथ पकड़े जाने पर पत्नी ने अपने पति को पीटा।
(नोट:अभद्र भाषा) pic.twitter.com/bjKLKRAFAW
— ANI_HindiNews (@AHindinews) September 21, 2022