ಲಂಡನ್: ಭಾರತೀಯರು ಎಲ್ಲಿಗೆ ಹೋದರೂ ತಮ್ಮ ದೇಶ ಮತ್ತು ಸಂಸ್ಕೃತಿಯನ್ನು ಮರೆಯುವುದಿಲ್ಲ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಇದಕ್ಕೆ ಜೀವಂತ ಉದಾಹರಣೆ ಕಂಡುಬರುತ್ತದೆ. ಅಂದ ಹಾಗೇ ಯುಕೆಯ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಘಟಿಕೋತ್ಸವ ಸಮಾರಂಭದಲ್ಲಿ ಶಿಕ್ಷಕರ ಪಾದಗಳನ್ನು ಮುಟ್ಟಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ.
ಈ ವೀಡಿಯೊದಲ್ಲಿ, ಯುಕೆಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಶಿಕ್ಷಕರ ಪಾದಗಳನ್ನು ಮುಟ್ಟಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಸಮಾರಂಭದ ಸಮಯದಲ್ಲಿ, ಹುಡುಗ ಭಾರಿ ಚಪ್ಪಾಳೆಗಳ ನಡುವೆ ವೇದಿಕೆಯ ಮೇಲೆ ಏರುತ್ತಾನೆ ಮತ್ತು ವೇದಿಕೆ ಏರುತ್ತಿದ್ದಂತೆ ‘ಜೈ ಶ್ರೀ ರಾಮ್’ ಎಂದು ಜೋರಾಗಿ ಕೂಗುತ್ತಾನೆ. ಇದರ ನಂತರ, ಅವನು ನೇರವಾಗಿ ಹೋಗಿ ಶಿಕ್ಷಕರ ಪಾದಗಳನ್ನು ಮುಟ್ಟುತ್ತಾನೆ. ಈ ಹುಡುಗ ಬ್ರಿಟನ್ ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರ ಹೃದಯ ವೈರಲ್ ಆಗಿದೆ.
Be proud of your roots, values and culture – Student touches feet of the teacher and chants 'Jai Siya Ram' at Convocation Ceremony in Leicester, UK pic.twitter.com/LYTKybw4hl
— Megh Updates 🚨™ (@MeghUpdates) January 25, 2024