ನವದೆಹಲಿ : ಖಾಸಗಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ “ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಎಂಬ ಕಾರಣಕ್ಕೆ ಭಾರತ ಗೌರವಿಸಬೇಕು” ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ವೈಯಕ್ತಿಕವಾಗಿ ಭೇಟಿ ನೀಡಿ, ಲಾಹೋರ್ ಮತ್ತು ಅದರ ಶಕ್ತಿಯನ್ನ ಪರಿಶೀಲಿಸಿದ್ದೇನೆ” ಎಂದು ಹೇಳಿದ್ದಾರೆ.
‘ಹಮ್ ಪಾಕಿಸ್ತಾನ್ ಸೇ ದರ್ ಕೆ ರೆಹನಾ ಚಾಹಿಯೇ ಕ್ಯೂಂಕಿ ಉಸ್ ಕೆ ಪಾಸ್ ಅಣುಬಾಂಬ್ ಹೈ’ (ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬ ಕಾರಣಕ್ಕೆ ನಾವು ಭಯಪಡಬೇಕು) ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಪ್ರಧಾನಿಯನ್ನ ಕೇಳಿದಾಗ, ಪ್ರಧಾನಿ ಮೋದಿ ” ಪಾಕಿಸ್ತಾನ ಎಷ್ಟು ಶಕ್ತಿಶಾಲಿಯಾಗಿದೆ ಎಂದು ಪರಿಶೀಲಿಸಲು ನಾನು ವೈಯಕ್ತಿಕವಾಗಿ ಭೇಟಿ ನೀಡಿದ್ದೆ” ಎಂದು ಹೇಳಿದರು.
ಲಾಹೋರ್’ಗೆ ತಾವು ಭೇಟಿ ನೀಡಿದ್ದನ್ನ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, “ನಾನು ವೀಸಾ ಇಲ್ಲದೆ ಲಾಹೋರ್‌ಗೆ ವೈಯಕ್ತಿಕವಾಗಿ ಭೇಟಿ ನೀಡಿದ್ದೇನೆ ಮತ್ತು ಅವರ ಸಾಮರ್ಥ್ಯವನ್ನೂ ಪರಿಶೀಲಿಸಿದ್ದೇನೆ” ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.
https://x.com/MrSinha_/status/1793568871628382543
BIG NEWS: ‘ನನ್ನ ತಾಳ್ಮೆ ಪರೀಕ್ಷೆ’ ಮಾಡಬೇಡ, ವಿದೇಶದಿಂದ ವಾಪಾಸ್ ಬಾ: ‘ಪ್ರಜ್ವಲ್’ಗೆ ಹೆಚ್.ಡಿ ದೇವೇಗೌಡ ವಾರ್ನಿಂಗ್
‘ಪ್ರಜ್ವಲ್’ಗೆ ಕೊನೆ ಎಚ್ಚರಿಕೆ ಕೊಟ್ಟ ‘ಹೆಚ್.ಡಿ.ದೇವೇಗೌಡ’ರು; ‘SIT’ ಮುಂದೆ ಹಾಜರಾಗುವಂತೆ ತಾಕೀತು
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ‘BCCI’ ಸಂಪರ್ಕಿಸಿದೆ, ಆದ್ರೆ..! : ಆಸ್ಟ್ರೇಲಿಯಾದ ಮಾಜಿ ನಾಯಕ ‘ರಿಕಿ ಪಾಂಟಿಂಗ್’