ಕೆಎನ್ಎನ್ಡಿಜಿಟ್ ಡೆಸ್ಕ್ : ದೀಪಾವಳಿಯನ್ನ ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕದಲ್ಲಿಯೂ ಆಚರಿಸಲಾಗುತ್ತಿದೆ. ಅಲ್ಲಿನ ಜನರು ಈ ಹಬ್ಬದ ಬಗ್ಗೆ ತುಂಬಾನೇ ಉತ್ಸುಕರಾಗಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ನಿವಾಸದಲ್ಲಿ ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಅವರು ಮಿಂಚುಳ್ಳಿ ಸುಡುವ ವಿಡಿಯೋ ಕೂಡ ಹೊರಬಿದ್ದಿದೆ.
.@VP and @SecondGentleman during a Diwali Celebration at the VP’s Residence this evening.
🎥: neilmakhija on Instagram. pic.twitter.com/w8wq7tu1PB
— best of kamala harris (@archivekamala) October 22, 2022
ಅತಿಥಿಗಳಿಗೆ ಭಾರತೀಯ ಆಹಾರದ ವಿಶೇಷ ವ್ಯವಸ್ಥೆ.!
ಶುಕ್ರವಾರ ದೀಪಾವಳಿ ಆಚರಿಸಿ ಮಾತನಾಡಿದ ಕಮಲಾ, “ದೀಪಾವಳಿ.. ಸಂಸ್ಕೃತಿಗಳ ನಡುವೆ ಸಮನ್ವಯತೆಯನ್ನ ಸಾರುವ ಹಬ್ಬ” ಎಂದರು. ಉಪರಾಷ್ಟ್ರಪತಿಯವರ ಅಧಿಕೃತ ನಿವಾಸವನ್ನ ವರ್ಣರಂಜಿತ ದೀಪಗಳಿಂದ (ಮಣ್ಣಿನ ದೀಪಗಳು) ಅಲಂಕರಿಸಲಾಗಿತ್ತು. ಇನ್ನು ಅತಿಥಿಗಳಿಗೆ ಪಾನಿ ಪುರಿಯಿಂದ ಹಿಡಿದು ಸಾಂಪ್ರದಾಯಿಕ ಸಿಹಿತಿಂಡಿಗಳವರೆಗೆ ಭಾರತೀಯ ಭಕ್ಷ್ಯಗಳನ್ನ ನೀಡಲಾಯಿತು. ಕುತೂಹಲಕಾರಿಯೆಂದ್ರೆ, ಕಮಲಾ ಹ್ಯಾರಿಸ್ ತನ್ನ ದೀಪಾವಳಿ ಪಾರ್ಟಿಗೆ ಸುಮಾರು 900 ಜನರನ್ನ ಆಹ್ವಾನಿಸಿದ್ದಾರೆ.
“ಕತ್ತಲೆಯ ಮೇಲೆ ಬೆಳಕಿನ ಪ್ರಸ್ತುತತೆ ಮತ್ತು ಕತ್ತಲೆಯ ಕ್ಷಣಗಳನ್ನು ಎತ್ತಿ ತೋರಿಸುವ ಮೂಲಕ ಪ್ರೇರಿತರಾಗುವುದು. ಉಪಾಧ್ಯಕ್ಷೆಯಾಗಿ, ನಾನು ಅದರ ಬಗ್ಗೆ ಸಾಕಷ್ಟು ಯೋಚಿಸುತ್ತೇನೆ. ಯಾಕಂದ್ರೆ, ನಾವು ನಮ್ಮ ದೇಶ ಮತ್ತು ವಿಶ್ವದ ದೊಡ್ಡ ಸವಾಲುಗಳಿಂದ ದೂರ ಸರಿಯಲು ಸಾಧ್ಯವಿಲ್ಲ. ದೀಪಾವಳಿಯಂತಹ ಹಬ್ಬವು ಕತ್ತಲೆಯ ಕ್ಷಣಗಳಿಗೆ ಬೆಳಕನ್ನ ತರುವ ನಮ್ಮ ಶಕ್ತಿಯ ಪ್ರಾಮುಖ್ಯತೆಯನ್ನು ನೆನಪಿಸುವ ಕ್ಷಣಗಳು ಇವು” ಎಂದಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಂಡ ಕಮಲಾ ಹ್ಯಾರಿಸ್
ಚೆನ್ನೈನಲ್ಲಿ ತನ್ನ ಅಜ್ಜ-ಅಜ್ಜಿಯರೊಂದಿಗೆ ಬಾಲ್ಯದಲ್ಲಿ ಆಚರಿಸಿದ ದಿನಗಳನ್ನ ನೆನಪಿಸಿಕೊಂಡ ಹ್ಯಾರಿಸ್, ದೀಪಾವಳಿ ಎಂದರೆ ಸಂಪ್ರದಾಯಕ್ಕೆ ಸಂಬಂಧಿಸಿದೆ ಎಂದು ಹೇಳಿದರು. ಅದೊಂದು ಸಂಸ್ಕೃತಿ. ಇದು ಸಂಸ್ಕೃತಿಗಳು ಮತ್ತು ಸಮುದಾಯಗಳ ಸಾಮರಸ್ಯವನ್ನ ಪರಿಚಯಿಸುವ ಹಳೆಯ ಪರಿಕಲ್ಪನೆಯಾಗಿದೆ ಎಂದರು.
ಕಮಲಾ ಹ್ಯಾರಿಸ್ ಅವರ ದೀಪಾವಳಿ ಪಾರ್ಟಿಯಲ್ಲಿ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ, ಅಧ್ಯಕ್ಷರ ವಿಶೇಷ ಸಲಹೆಗಾರ ನೀರಾ ಟಂಡನ್ ಮತ್ತು ಜೋ ಬೈಡನ್ ಅವರ ಭಾಷಣ ಬರಹಗಾರ ವಿನಯ್ ರೆಡ್ಡಿ ಸೇರಿದಂತೆ ಬೈಡನ್-ಹ್ಯಾರಿಸ್ ಆಡಳಿತದ ಹಲವಾರು ಭಾರತೀಯ-ಅಮೆರಿಕನ್ ಸದಸ್ಯರು ಭಾಗವಹಿಸಿದ್ದರು.