ಗಾಲೆ: ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) 2022ರ ಪಂದ್ಯದಲ್ಲಿ ಗಾಲೆ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಕ್ಯಾಂಡಿ ಫಾಲ್ಕನ್ಸ್ನ ಚಮಿಕಾ ಕರುಣರತ್ನೆ ಅವರು ನಾಲ್ಕು ಹಲವು ಹಲ್ಲುಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಕ್ಯಾಂಡಿ ಫಾಲ್ಕನ್ಸ್ ಮತ್ತು ಗಾಲೆ ಗ್ಲಾಡಿಯೇಟರ್ಸ್ ನಡುವಿನ ಪ್ರಸ್ತುತ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) 2022 ರ ನಾಲ್ಕನೇ ಪಂದ್ಯದ ವೇಳೆ ಕ್ಯಾಚ್ ತೆಗೆದುಕೊಳ್ಳುವಾಗ ಶ್ರೀಲಂಕಾದ ಬೌಲಿಂಗ್ ಆಲ್ರೌಂಡರ್ ಚಮಿಕಾ ಕರುಣರತ್ನೆ ಗಾಯಗೊಂಡಿದ್ದರು. ಕರುಣರತ್ನೆ ಅದನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಚೆಂಡು ಅವರ ಮುಖಕ್ಕೆ ತಗುಲಿದ್ದರಿಂದ ನಾಲ್ಕು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ.
ಚಮಿಕಾ ಕರುಣರತ್ನೆ ಅವರನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ಗಾಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಕ್ಯಾಂಡಿ ಫಾಲ್ಕನ್ಸ್ ತಂಡದ ನಿರ್ದೇಶಕ ಕ್ರಿಸ್ ಪೊವೆಲ್ ಅವರ ಪ್ರಕಾರ, ಚಮಿಕಾ ಸ್ಥಿರವಾಗಿದ್ದಾರೆ ಮತ್ತು ಉಳಿದ ಪಂದ್ಯಗಳಿಗೆ ಲಭ್ಯವಿರುತ್ತಾರೆ ಅಂತ ತಿಳಿಸಿದ್ದಾರೆ.
Chamika Karunaratne lost 3-4 teeth while taking this catch. pic.twitter.com/cvB44921yZ
— Johns. (@CricCrazyJohns) December 8, 2022