ನವದೆಹಲಿ: ಜೈಲಿನಲ್ಲಿರುವ ಎಎಪಿ ಸಚಿವ ಸತ್ಯೇಂದರ್ ಜೈನ್ ಅವರ ಹೊಸ ವಿಡಿಯೋವೊಂದು ಬೆಳಕಿಗೆ ಬಂದಿದೆ, ಅಲ್ಲಿ ಆತ ತಿಹಾರ್ ಜೈಲಿನೊಳಗೆ ಹೊರಗಿನ ಊಟವನ್ನು ಪಡೆಯುತ್ತಿರುವುದನ್ನು ಕಾಣಬಹುದು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ನಡುವೆ ನ್ಯಾಯಾಲಯಕ್ಕೆ ನೀಡಿದ ಭರವಸೆಯ ಹೊರತಾಗಿಯೂ ಜಾರಿ ನಿರ್ದೇಶನಾಲಯವು ಮಾಧ್ಯಮಗಳಿಗೆ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಜೈನ್ ಆರೋಪಿಸಿದ್ದಾರೆ ಮತ್ತು ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ‘ಅವರ ಕೃತ್ಯದಿಂದ ಪ್ರತಿ ನಿಮಿಷವೂ ನನಗೆ ಕಳಂಕ ಬರುತ್ತದೆ’ ಎಂದು ಹೇಳಿದ್ದಾರೆ.
ವಿಡಿಯೋ ಸೋರಿಕೆಯು ತನ್ನ ವಿಚಾರಣೆಯನ್ನು ಪೂರ್ವಾಗ್ರಹ ಪೀಡಿತಗೊಳಿಸುತ್ತದೆ ಎಂದು ಹೇಳಿರುವ ಸಚಿವರು, ’26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್ ಕೂಡ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯನ್ನು ಪಡೆದಿದ್ದಾನೆ’ ಅಂತ ಹೇಳಿದ್ದಾರೆ.
#WATCH | Latest CCTV footage sourced from Tihar jail sources show Delhi Minister Satyendar Jain getting proper food in the jail.
Tihar Jail sources said that Satyendar Jain has gained 8 kg of weight while being in jail, contrary to his lawyer's claims of him having lost 28 kgs. pic.twitter.com/cGEioHh5NM
— ANI (@ANI) November 23, 2022