ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೇರ ಸಂಗೀತ ಕಚೇರಿಯ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಹುಮನಾಯ್ಡ್ ರೋಬೋಟ್’ಗಳು ಗಮನ ಸೆಳೆದಿವೆ. ಇತ್ತೀಚೆಗೆ ಚೆಂಗ್ಡುವಿನಲ್ಲಿ ನಡೆದ ಚೀನೀ ಅಮೇರಿಕನ್ ಗಾಯಕ-ಗೀತರಚನೆಕಾರ ವಾಂಗ್ ಲೀಹೋಮ್ ಅವರ ಸಂಗೀತ ಕಚೇರಿಯಲ್ಲಿ, ಆರು ಹುಮನಾಯ್ಡ್ ರೋಬೋಟ್’ಗಳು ಸ್ವಾರ್ ಜೊತೆಗೆ ಅದ್ಭುತ ಪ್ರದರ್ಶನ ನೀಡಿದ್ದು, ತಕ್ಷಣವೇ ಇಂಟರ್ನೆಟ್’ನಲ್ಲಿ ಚರ್ಚೆಯಾಯಿತು.
ವಾಂಗ್ ಅವರ ಓಪನ್ ಫೈರ್ ಹಾಡಿನಲ್ಲಿ ರೋಬೋಟ್’ಗಳು ಸೇರಿಕೊಂಡವು. ಮನುಷ್ಯರಂತೆ ಮಸ್ತ್ ಡ್ಯಾನ್ಸ್ ಮಾಡಿದ್ದು, ಯಾಂತ್ರಿಕವಾಗಿರದೆ ಅವುಗಳ ಚಲನೆಗಳು ಸಂಗೀತದೊಂದಿಗೆ ಸರಾಗವಾಗಿ ಸಾಗುತ್ತಿದ್ದವು. ನೋಡುಗರಿಗೆ ಯಂತ್ರಗಳಿಗಿಂತ ನಿಜವಾದ ಬ್ಯಾಕಪ್ ನೃತ್ಯಗಾರರಂತೆ ಭಾಸವಾಯಿತು. ರೋಬೋಟ್’ಗಳ ನೃತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ವಿಡಯೋಗೆ ಎಲೋನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದು, ‘ಪ್ರಭಾವಶಾಲಿ’ ಎಂದು ಹೇಳಿದ್ದಾರೆ.
Robots in China are doing it all now, even dancing on stage like pros.
Here Unitree robots doing Webster flips and are performing at Chinese-American singer Wang Leehom’s concert in Chengdu.pic.twitter.com/2BNWdok0bf
— Rohan Paul (@rohanpaul_ai) December 19, 2025
ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ: ಸಚಿವ ಶರಣಪ್ರಕಾಶ್ ಪಾಟೀಲ್








