ನವದೆಹಲಿ : ಹಿಂದೂಗಳ ಬಗ್ಗೆ ಅವಹೇಳನಕಾರಿ ಎಂದು ಭಾವಿಸಲಾದ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಮಹಾರಾಷ್ಟ್ರದ ದೇವಾಲಯವೊಂದು ಕಾಂಗ್ರೆಸ್ ಸಂಸದನ ಚಿತ್ರವಿರುವ ಪೋಸ್ಟರ್‘ನ್ನ ಡೋರ್ಮ್ಯಾಟ್ ಆಗಿ ಬಳಸಿದೆ. ಸಧ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ. “ಹಿಂದೂಗಳನ್ನ ಹಿಂಸಾತ್ಮಾಕ ಎಂದು ಕರೆಯಲು ನಿಮಗೆ ಎಷ್ಟು ಧೈರ್ಯ?” ಎಂಬ ಪಠ್ಯದೊಂದಿಗೆ ರಾಹುಲ್ ಗಾಂಧಿ ಚಿತ್ರವಿರುವ ಪೋಸ್ಟರ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ.
ಜುಲೈ 1 ರಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಚೊಚ್ಚಲ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿಯ ಹಿಂದೂ ರಾಷ್ಟ್ರೀಯವಾದಿ ನಿಲುವನ್ನ ಟೀಕಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ವೈರಲ್ ಆಗಿದೆ.
ತಮ್ಮ ಭಾಷಣದಲ್ಲಿ ಅವರು ತಾವು ಹಿಂದೂಗಳು ಎಂದು ಹೇಳಿಕೊಳ್ಳುತ್ತಿರುವವರು ಹಿಂಸಾಚಾರ ಮತ್ತು ದ್ವೇಷವನ್ನ ಪ್ರಚೋದಿಸುತ್ತಿದ್ದಾರೆ” ಎಂದು ಅವರು ಹೇಳಿದರು. ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ, “ಇದು ಬಹಳ ಗಂಭೀರವಾದ ವಿಷಯ. ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ (ಬಡ ಹಿಂದೂ ಸಮಾಜ ಕೋ ಹಿನ್ಸಕ್ ಕೆಹ್ನಾ ಯೆ ಗಂಭೀರ್ ವಿಶೇ ಹೈ)” ಎಂದರು. ಇದಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಕೇವಲ ಹಿಂದೂ ಸಮುದಾಯವಲ್ಲ ಎಂದಿದ್ದರು.
ವಿಡಿಯೋ ನೋಡಿ.!
As a mark of protest against Rahul Gandhi's anti-Hindu statements, a temple management in Maharashtra used Rahul Gandhi's picture as a doormat.
The text on doormat says, "How dare you call Hindus violent and eve teasers?
Innovative idea!!!pic.twitter.com/rNPoNdSM0M
— Mr Sinha (@MrSinha_) July 8, 2024
BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ
BREAKING : ಒಡಿಶಾದಲ್ಲಿ ‘ಪುರಿ ಜಗನ್ನಾಥ ರಥಯಾತ್ರೆ’ ವೇಳೆ ಕಾಲ್ತುಳಿತ ; ಇಬ್ಬರು ಸಾವು, 130 ಮಂದಿಗೆ ಗಾಯ
BREAKING : ಜಮ್ಮು-ಕಾಶ್ಮೀರದಲ್ಲಿ ‘ಸೇನಾ ಬೆಂಗಾವಲು ವಾಹನ’ದ ಮೇಲೆ ಉಗ್ರರ ದಾಳಿ ; ಒರ್ವ ಯೋಧನಿಗೆ ಗಾಯ