ಹೈದರಾಬಾದ್: ಹಲೀಮ್ ತಿಂಡಿ ಪಡೆದುಕೊಳ್ಳವು ಸಲುವಾಗಿ ಹೈದರಾಬಾದ್ನ ರೆಸ್ಟೋರೆಂಟ್ನಲ್ಲಿ ಜಮಾಯಿಸಿದ ಜನಸಮೂಹವನ್ನು ಚದುರಿಸಲು ತೆಲಂಗಾಣ ಪೊಲೀಸರು ಮಂಗಳವಾರ ಲಾಠಿ ಪ್ರಹಾರ ನಡೆಸಿದ್ದಾರೆ.
ಹಲೀಮ್ ಮಟನ್ ಪಲ್ಯವಾಗಿದ್ದು, ಇದನ್ನು ಬೇಳೆಕಾಳುಗಳು, ಗೋಧಿ ಮತ್ತು ಮಸಾಲೆಗಳೊಂದಿಗೆ ತಯಾರು ಮಾಡಲಾಗುತ್ತದೆ. ಇದನ್ನು ತುಪ್ಪ ತಯಾರಿಸಲಾಗುತ್ತದೆ ಮತ್ತು ನಿಧಾನವಾಗಿ ಕಡಿಮೆ ಉರಿಯಲ್ಲಿ ಗಂಟೆಗಳ ಕಾಲ ಬೇಯಿಸಲಾಗುತ್ತದೆ, ಅದು ದಪ್ಪ ಪೇಸ್ಟ್ ಆಗಿ ಬದಲಾಗುತ್ತದೆ. ಇದು ಹಲವರ ನೆಚ್ಚಿನ ಖಾಧ್ಯವಾಗಿದೆ ಕೂಡ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ನಗರದ ಮಲಕ್ಪೇಟ್ ಪ್ರದೇಶದಲ್ಲಿ ಮಂಗಳವಾರ ರೆಸ್ಟೋರೆಂಟ್ ಉದ್ಘಾಟಿಸಲಾಯಿತು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಹಲೀಮ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿತ್ತು ಎನ್ನಲಾಗಿದೆ.
ಉಚಿತ ಹಲೀಮ್ ವಿತರಣೆಯ ಬಗ್ಗೆ ತಿಳಿದ ನಂತರ, ರೆಸ್ಟೋರೆಂಟ್ ಹೊರಗೆ ದೊಡ್ಡ ಜನಸಮೂಹ ಜಮಾಯಿಸಿತು, ಇದು ಈ ಪ್ರದೇಶದಲ್ಲಿ ಸಂಚಾರ ಅಡಚಣೆಗೆ ಕಾರಣವಾಯಿತು, ನಂತರ ರೆಸ್ಟೋರೆಂಟ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತು.ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ಜನಸಮೂಹವನ್ನು ಬಲಪ್ರಯೋಗದಿಂದ ನಿಯಂತ್ರಿಸಿತು ಎನ್ನಲಾಗಿದೆ.
VIDEO | Police resorted to lathicharge to disperse the crowd that thronged a restaurant in Hyderabad's Malakpet allegedly to get free Haleem earlier today.
The restaurant management called the police after the crowd went out of control, leading to a massive traffic jam in the… pic.twitter.com/dBRnLO9sbd
— Press Trust of India (@PTI_News) March 12, 2024