ನಾಗ್ಪುರ: ದಿಯೋಲಾಲಿಯ ಎನ್ಸಿಪಿ ಶಾಸಕ ಸರೋಜ್ ಬಾಬುಲಾಲ್ ಅಹಿರೆ ಅವರು ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ತಮ್ಮ ನವಜಾತ ಶಿಶುವಿನೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಘಟನೆ ನಡೆದಿದ್ದು, ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ವರ್ಷದ ಸೆಪ್ಟೆಂಬರ್ 30 ರಂದು ಅಹಿರೆ ಮಗುವಿಗೆ ಜನ್ಮ ನೀಡಿದರು ಮತ್ತು ಸೋಮವಾರದ ಮೊದಲು ವಿಧಾನಸಭಾ ಅಧಿವೇಶನದಲ್ಲಿ ಅವರು ತಮ್ಮ ನವಜಾತ ಶಿಶುವಿನ ಜೊತೆಗೆ ಆಗಮಿಸಿ ಎಲ್ಲರ ಗಮನ ಸೆಳೇದರು.
ತಾಯಿ ಮತ್ತು ರಾಜಕಾರಣಿ ಸರೋಜ್ ಅಹಿರೆ ತನ್ನ ಶಿಶುವನ್ನು ಶಾಸನ ಸಭೆಗೆ ಕರೆದೊಯ್ಯುವ ವೇಳೇಯಲ್ಲಿ ಆ ಘಟನೆಯನ್ನು ವೀಡಿಯೊ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಮಲಗಿದ್ದ ಪುಟ್ಟ ಮಗುವನ್ನು ತನ್ನ ಕೈಗಳಲ್ಲಿ ಹಿಡಿದಿರುವುದು ಕಂಡುಬಂದಿದೆ.
ನಾಗ್ಪುರ ಚಳಿಗಾಲದ ಅಧಿವೇಶನವು ಡಿಸೆಂಬರ್ 19 ರಂದು ಪ್ರಾರಂಭವಾಯಿಗಿದ್ದು. ಏತನ್ಮಧ್ಯೆ, ಬಿಜೆಪಿ ಸರ್ಕಾರ ಮತ್ತು ಶಿವಸೇನೆಯ ಏಕನಾಥ್ ಶಿನಾ ಬಣದ ವಿರುದ್ಧ ಪ್ರತಿಭಟಿಸಿ ವಿರೋಧ ಪಕ್ಷಗಳು ಭಾನುವಾರ ಸಾಂಪ್ರದಾಯಿಕ ಚಹಾ ಕೂಟವನ್ನು ಬಹಿಷ್ಕರಿಸಿದವು.
अडीच महिन्यांच्या बाळासह आमदार सरोज अहिरे विधानभवनात:म्हणाल्या – माझ्या बाळाप्रमाणेच मला मतदारसंघातील समस्याही महत्त्वाच्या#SarojAhire #NCPMLAAhire #NagpurAdhiveshan @PawarSpeaks @supriya_sule @AjitPawarSpeaks https://t.co/Xm5tMJVlcP pic.twitter.com/hW4s5kfEg1
— Divya Marathi (@MarathiDivya) December 19, 2022