ಮೈಸೂರು: ಸಾಲ ಕಟ್ಟಿಸಿಕೊಳ್ಳವು ನೆಪದಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬ ಮಹಿಳೆಯರ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.
ಹುಣಸೂರಿನ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದ ರೈತ ಮಹಿಳೆ ಲತಾ ಎಂಬುವರಿಗೆ ಬ್ಯಾಂಕ್ ಸಿಬ್ಬಂದಿ ಸುರೇಶ್ ಎಂಬಾತ ಧಮ್ಕಿ ಹಾಕಿದ್ದು, ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು, ಸಾಲ ಮನ್ನಾ ಆಗುತ್ತದೆ ಎಂದು ರೈತ ಮಹಿಳೆಗೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಧಮ್ಕಿ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ. ಬ್ಯಾಂಕ್ನಲ್ಲಿ ಲತಾ 50 ಸಾವಿರ ಸಾಲ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಈ ನಡುವೆ ಅವರು ವಾರಕ್ಕೆ 500 ರೂ. ನಂತೆ ಕಂತು ಪಾವತಿಸಲು ತಡವಾಗಿದೆ ಎನ್ನಳಾಗಿದ.ಎ ಈ ನಡುವೆ ಸಾಲ ವಸೂಲಿಗೆ ಸುರೇಶ್ ಎಂಬಾತ ನಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.