ನವದೆಹಲಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳ ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾವಚಿತ್ರವನ್ನ ಪ್ರದರ್ಶಿಸಿದ್ದಕ್ಕಾಗಿ ಭಗತ್ ಸಿಂಗ್ ಅವರ ಮೊಮ್ಮಗ ಯಾದ್ವಿಂದರ್ ಸಂಧು ಆಮ್ ಆದ್ಮಿ ಪಕ್ಷ (AAP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಇಂದು ಬೆಳಿಗ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ವೀಡಿಯೊ ಬಂದಿದ್ದು, ಅದರಲ್ಲಿ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಫೋಟೋವನ್ನ ಗೋಡೆಯ ಮೇಲೆ ಹಾಕಲಾಗಿದೆ. ಇದನ್ನು ನೋಡಿದ ನಂತ್ರ ನನಗೆ ಭಯಂಕರವೆನಿಸಿತು. ಅವರನ್ನ ದಂತಕಥೆಗಳೊಂದಿಗೆ ಹೋಲಿಸುವ ಪ್ರಯತ್ನ ನಡೆಯಿತು, ಅಂತಹ ಚಟುವಟಿಕೆಗಳಿಂದ ದೂರವಿರಲು ನಾನು ಆಮ್ ಆದ್ಮಿ ಪಕ್ಷವನ್ನ ಕೇಳುತ್ತೇನೆ” ಎಂದು ಯದ್ವಿಂದರ್ ಸಂಧು ಹೇಳಿದರು.
“ಭಗತ್ ಸಿಂಗ್ ದೇಶದ ಜನರಿಗಾಗಿ ತಮ್ಮ ಜೀವನವನ್ನ ತ್ಯಾಗ ಮಾಡಿದರು. ಇದಕ್ಕೆ ವ್ಯತಿರಿಕ್ತವಾಗಿ, ಎಎಪಿಯ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಶಿಕ್ಷೆಯನ್ನ ಎದುರಿಸುತ್ತಿದ್ದಾರೆ” ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಏಪ್ರಿಲ್ 4 ರಂದು ವಿಡಿಯೋ ಸಂದೇಶವನ್ನು ನೀಡಿದರು, ಅವರು ಜೈಲಿನಲ್ಲಿದ್ದಾಗ ಎಎಪಿ ಮುಖ್ಯಸ್ಥರು ಬರೆದ ಹೇಳಿಕೆಯನ್ನ ಓದಿದರು.
ಭಗತ್ ಸಿಂಗ್ ಮತ್ತು ಬಿ.ಆರ್ ಅಂಬೇಡ್ಕರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರನ್ನ ಜೈಲಿನಲ್ಲಿರುವ ಸನ್ನಿವೇಶದಲ್ಲಿ ಚಿತ್ರಿಸುವ ಚಿತ್ರವನ್ನ ಪ್ರಮುಖವಾಗಿ ಒಳಗೊಂಡಿರುವ ಹಿನ್ನೆಲೆಯು ಈ ಸಂದೇಶವನ್ನ ಗಮನಾರ್ಹವಾಗಿಸಿತು.
VIDEO | Here’s what grandson of Bhagat Singh, Yadvinder Sandhu, said on the photograph of Delhi CM Arvind Kejriwal behind bars, flanked by portraits of Bhagat Singh and BR Ambedkar.
“This morning, a video of Sunita Kejriwal (wife of Delhi CM Arvind Kejriwal) came in which a… pic.twitter.com/RS0XLOFIlk
— Press Trust of India (@PTI_News) April 4, 2024
ಜೂನ್ ನಂತರ ಬಳಕೆದಾರರಿಗೆ ‘ಪಾಸ್ ವರ್ಡ್’ ಹಂಚಿಕೊಳ್ಳುವುದನ್ನು ನಿಲ್ಲಿಸಲಿದೆ ‘ಡಿಸ್ನಿ ಪ್ಲಸ್’
ಎರಡನೇ ಮಹಾಯುದ್ಧದ ಸೈನಿಕ UK ಯ ‘ಜಾನ್ ಟಿನ್ನಿಸ್ವುಡ್’ ‘ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ’ ಎಂಬ ಹೆಗ್ಗಳಿಕೆಗೆ ಪಾತ್ರ
BREAKING: ಕೇರಳದ ಕಣ್ಣೂರಿನಲ್ಲಿ ಬಾಂಬ್ ತಯಾರಿಕೆ ವೇಳೆ ಸ್ಫೋಟ, ಓರ್ವ ಸಾವು, ಓರ್ವನ ಸ್ಥಿತಿ ಗಂಭೀರ!