ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಹಿಂದೂಗಳು “ಮುಸ್ಲಿಂ ಸೂತ್ರ”ವನ್ನು ಅನುಸರಿಸಬೇಕು ಮತ್ತು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವಂತೆ ಮಾಡಬೇಕು ಎಂದು ಶುಕ್ರವಾರ ಹೇಳಿದ್ದಾನೆ.
ಇದೇ ವೇಳೇ ಆತ “ಮುಸ್ಲಿಂ ಪುರುಷರು 20-22 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ, ಮತ್ತು ಮುಸ್ಲಿಂ ಮಹಿಳೆಯರು 18 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ – ಕಾನೂನಿನಿಂದ ಅನುಮತಿಸಲಾದ ವಯಸ್ಸು. ಮತ್ತೊಂದೆಡೆ, (ಹಿಂದೂಗಳು) ಮದುವೆಗೆ ಮೊದಲು ಒಬ್ಬರು, ಎರಡು ಅಥವಾ ಮೂರು ಅಕ್ರಮ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳಿಗೆ ಜನ್ಮ ನೀಡುವುದಿಲ್ಲ, ಆನಂದಿಸುತ್ತಾರೆ ಮತ್ತು ಹಣವನ್ನು ಉಳಿಸುತ್ತಾರೆ ಅಂಥ ಹೇಳಿದ್ದಾರೆ. “40 ವರ್ಷ ವಯಸ್ಸಿನ ನಂತರ, ಅವರು (ಹಿಂದೂಗಳು) ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಆದ್ದರಿಂದ, ಅವರು 40 ರ ನಂತರ ಮಕ್ಕಳನ್ನು ಹೆರುತ್ತಾರೆ ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಫಸಲು ಸಿಗುತ್ತದೆ. ಆಗ ಬೆಳವಣಿಗೆಯಾಗುತ್ತದೆ ಅಂತ ಹೇಳಿದ್ದಾರೆ. “ಅವರು (ಹಿಂದೂಗಳು) ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು ಮತ್ತು ತಮ್ಮ ಗಂಡುಮಕ್ಕಳನ್ನು 20-22 ವಯಸ್ಸಿನಲ್ಲಿ ಮತ್ತು ಅವರ ಹೆಣ್ಣುಮಕ್ಕಳನ್ನು 18-20 ವಯಸ್ಸಿನಲ್ಲಿ ಮದುವೆಯಾಗಬೇಕು. ಹಾಗಾದರೆ ಎಷ್ಟು ಮಕ್ಕಳು ಹುಟ್ಟುತ್ತಾರೆ ನೋಡಿ.. ಅಂತ ಆತ ಹೇಳಿದನು.
#WATCH | Hindus should follow the Muslim formula of getting their girls married at 18-20 years, says AIUDF President & MP, Badruddin Ajmal. pic.twitter.com/QXIMrFu7g8
— ANI (@ANI) December 2, 2022