ನವದೆಹಲಿ: ಶನಿವಾರ, ಹರಿಯಾಣದ ಯಮುನಾ ನಗರದ ಮಹಿಳೆಯೊಬ್ಬರು ಅಪಹರಣದ ಪ್ರಯತ್ನದಿಂದ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಅಪಹರಣಕಾರರ ಪ್ರಯತ್ನವು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಪೊಲೀಸರು ಶಂಕಿತರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.
ಜಿಮ್ ನಿಂದ ಕಾರಿಗೆ ಮರಳುತ್ತಿದ್ದ ಮಹಿಳೆಯನ್ನು ಅಪಹರಿಸಲು ನಾಲ್ವರು ವ್ಯಕ್ತಿಗಳು ಪ್ರಯತ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. “ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು.” ತನಿಖೆ ನಡೆಯುತ್ತಿದೆ” ಎಂದು ಯಮುನಾ ನಗರ ಡಿಎಸ್ಪಿ ಕಮಲ್ದೀಪ್ ಸಿಂಗ್ ಹೇಳಿದ್ದಾರೆ. ಮಹಿಳೆಯನ್ನು ಅಪಹರಿಸಲು ಸೂಕ್ತ ಅವಕಾಶವನ್ನು ಹುಡುಕುತ್ತಿರುವ ಪುರುಷರು ವಾಹನದ ಪಕ್ಕದಲ್ಲಿ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
#WATCH | Caught On Camera: Miscreants tried to kidnap a woman in Haryana's Yamuna Nagar city yesterday
After doing gym, the woman sat in her car. 4 people came & entered her car & tried to kidnap her. One accused has been caught. Probe underway: DSP Kamaldeep Singh, Yamuna Nagar pic.twitter.com/XvuN22yfWy
— ANI (@ANI) January 1, 2023