ಮಾಸ್ಕೋ: ರಷ್ಯಾದ ಯೆಸ್ಕ್ ನಗರದಲ್ಲಿ ಮಿಲಿಟರಿ ವಿಮಾನವೊಂದು ಒಂಬತ್ತು ಅಂತಸ್ತಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿದೆ. ವಿಮಾನ ಅವಘಡ ನಡೆದ ಬಳಿಕ ಮೊದಲ ಮಹಡಿಯಿಂದ ಒಂಬತ್ತನೇ ಮಹಡಿಯವರೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯುದ್ಧ ವಿಮಾನದ ಎಂಜಿನ್ ವೈಫಲ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಬಹುಮಹಡಿ ಕಟ್ಟಡದಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ಈ ವಿಮಾನವನ್ನು ಸುಖೋಯ್ -34 ಫೈಟರ್ ಜೆಟ್ ಎಂದು ಗುರುತಿಸಲಾಗಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ವಿಮಾನ ಪತನಗೊಳ್ಳುವ ಮೊದಲು ಸಿಬ್ಬಂದಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಎನ್ನಲಾಗಿದ್ದು. ಅಪಾರ್ಟ್ಮೆಂಟ್ ಕಟ್ಟಡದ ಐದು ಮಹಡಿಗಳು ಬೆಂಕಿಗೆ ಆಹುತಿಯಾಗಿವೆ, ಮೇಲಿನ ಮಹಡಿಗಳು ಕುಸಿದಿವೆ ಮತ್ತು ಸುಮಾರು 45 ಅಪಾರ್ಟ್ಮೆಂಟ್ಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ತುರ್ತು ಸಚಿವಾಲಯವನ್ನು ಉಲ್ಲೇಖಿಸಿ ಇಂಟರ್ಫ್ಯಾಕ್ಸ್ ಮಾಧ್ಯಮ ವರದಿ ಮಾಡಿದೆ.
ಯೆಸ್ಕ್ ನಗರವು ಅಜೋವ್ ಸಮುದ್ರದ ಕರಾವಳಿ ಪ್ರದೇಶದಲ್ಲಿ . ಇದು ದಕ್ಷಿಣ ಉಕ್ರೇನ್ ಮತ್ತು ದಕ್ಷಿಣ ರಷ್ಯಾದ ಗಡಿ ಪ್ರದೇಶವಾಗಿದೆ. ರಷ್ಯಾದ ತನಿಖಾ ಸಮಿತಿಯು ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಅದಾಗ್ಯೂ, ಘಟನೆಯಲ್ಲಿನ ನಷ್ಟ ಮತ್ತು ಸಾವುಗಳ ವಿವರಗಳು ಇನ್ನೂ ಪತ್ತೆಯಾಗಿಲ್ಲ.
WATCH: Fighter jet crashes into apartment building in western Russia, causing an unknown number of casualties#russia #jetcrash #fighterjetcrash #Ukraine pic.twitter.com/DOLj2d3Qhw
— Muhammad Awais (@AwaisKhanTweets) October 17, 2022