ಸಿಂಧ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾರಿ ಪ್ರವಾಹ ಉಂಟಾಗ್ತಿದೆ. ಈ ನಡುವೆ ಪ್ರತಿಕೂಲ ಪರಿಸ್ಥಿತಿಗಳು ಮತ್ತು ವಿನಾಶಗಳು ಈ ಪ್ರದೇಶದಲ್ಲಿ ವಾಸಿಸುವ ಹಿಂದೂಗಳ ಮನಸ್ಸನ್ನ ಛಿದ್ರಗೊಳಿಸುತ್ತಲೇ ಇವೆ. ಶುಕ್ರವಾರ, ಕಿರಾಣಿ ವಸ್ತುಗಳು ಮತ್ತು ಆಹಾರವನ್ನ ಒದಗಿಸುವ ನೆಪದಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಇಬ್ಬರು ಪಾಕಿಸ್ತಾನಿ ಮುಸ್ಲಿಮರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಗಳು ಬಹಿರಂಗ ಪಡಿಸಿವೆ.
ಇಬ್ಬರು ಆರೋಪಿಗಳನ್ನ ಆಟೋ ರಿಕ್ಷಾ ಚಾಲಕ ಖಾಲಿದ್ ಮತ್ತು ದಿಲ್ಶೇರ್ ಎಂದು ಗುರುತಿಸಲಾಗಿದೆ. ಮಚ್ಚಿ ಜಾತಿಗೆ ಸೇರಿದ ಇವರಿಬ್ಬರು ಸಂತ್ರಸ್ತ ಮಹಿಳೆಗೆ ಮಾದಕ ದ್ರವ್ಯ ನೀಡಿ ಎರಡು ದಿನಗಳ ಕಾಲ ಕ್ರೂರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಿಂಧ್ ಪ್ರಾಂತ್ಯದ ಸಂಘರ್ ಜಿಲ್ಲೆಯ ಶಹದಾದ್ಪುರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈಗ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಮಹಿಳೆ ತನ್ನ ದುಃಸ್ಥಿತಿಯನ್ನ ರೆಕಾರ್ಡ್ ಮಾಡಿದ್ದಾಳೆ. ಆರೋಪಿ ಆಟೋ ರಿಕ್ಷಾ ಚಾಲಕ ತನ್ನನ್ನ ವಂಚಿಸಿದ್ದು, ಅವನು ದಿನಸಿ ವಸ್ತುಗಳನ್ನ ಒದಗಿಸುವುದಾಗಿ ಹೇಳಿದನು ಎಂದು ಹೇಳಿದ್ದಾಳೆ. “ಅವನು ನನ್ನನ್ನ ಕರೆದೊಯ್ದು ವಿಷಪೂರಿತ ವಸ್ತುವನ್ನ ತಿನ್ನುವಂತೆ ಮಾಡಿ, ಖಾಲಿದ್ ಮತ್ತು ದಿಲ್ಶೇರ್ ಎಂಬ ಇಬ್ಬರು ಪುರುಷರು ನನ್ನ ಮೇಲೆ ಅತ್ಯಾಚಾರ ಎಸಗಿದರು. ನಂತ್ರ ನೀರು ನೀಡಿ ನನ್ನನ್ನ ಬಿಟ್ಟು ಹೋದರು” ಎಂದು ಅಳಲು ತೊಡಿಕೊಂಡಿದ್ದಾಳೆ.
Just In: In the promise of getting a food ration, a young #Hindu girl Bhagwati has been brutally raped for 2 days in a flood-hit area of Shahdadpur district Sanghar, Sindh.
This is such a shameful act and completely disgusting. #FloodsInPakistan #SavePakistaniMinoritiesGirls pic.twitter.com/HHztk91UOp— Voice of Pakistan Minority (@voice_minority) September 1, 2022