ನವದೆಹಲಿ: ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ವೇಳೇ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಕನನ್ನು ನೋಡಿ ಪ್ರಯಾಣಿಕನ ಜೀವ ಉಳಿಸಿದ್ದಾರೆ. ಸಿಐಎಸ್ಎಫ್ ಯೋಧ ಕಪಿಲ್ ರಾಘವ್ ಪ್ರಯಾಣಿಕನ ಜೀವವನ್ನು ಉಳಿಸಲು ಸಿಪಿಆರ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಜನರು ಸಿಐಎಸ್ಎಫ್ ಯೋಧ ಕಪಿಲ್ ರಾಘವ್ ಅವರನ್ನು ಹೊಗಳುತ್ತಿದ್ದಾರೆ.
ಹೃದಯಘಾತಕ್ಕೆ ಒಳಗಾದ ಪ್ರಯಾಣಿಕನು ಅಹಮದಾಬಾದ್ನಿಂದ ಮುಂಬೈಗೆ ಹೋಗುತ್ತಿದ್ದನು ಎನ್ನಲಾಗಿದೆ. ಈ ವೇಳೆಯಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರು ಹೃದಯಾಘಾತಕ್ಕೆ ಒಳಗಾದರು ಅಂತ ತಿಳಿದು ಬಂದಿದೆ. ಸಿಐಎಸ್ ಎಫ್ ಯೋಧ ಕಪಿಲ್ ರಾಘವ್ ಸಿಪಿಆರ್ ನೀಡುವ ಮೂಲಕ ಪ್ರಯಾಣಿಕನ ಜೀವ ಉಳಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ಜನತಾ ಪಕ್ಷದ ನಾಯಕ ಸುನಿಲ್ ದೇವಧರ್ ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Prompt action of CISF Jawan's saved a life at @ahmairport.
Salute to this great force 🙏 pic.twitter.com/miBP4g8Ft6— Sunil Deodhar (@Sunil_Deodhar) December 22, 2022