ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಉದ್ಯಾನವನದಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಜನರು ಶುಕ್ರವಾರ ಆಘಾತಕಾರಿ ದೃಶ್ಯಕ್ಕೆ ಸಾಕ್ಷಿಯಾದರು. ಹೌದು, ಒಬ್ಬ ಮಹಿಳೆ ಎಲ್ಲರ ಮುಂದೆಯೇ ಜಿಆರ್ಪಿ ಕಾನ್ಸ್ಟೇಬಲ್ಗೆ ಥಳಿಸಿ ಅವನ ಬಟ್ಟೆಗಳನ್ನು ಹರಿದುಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ಸಮಯದಲ್ಲಿ, ಮಹಿಳೆ ಕಾನ್ಸ್ಟೇಬಲ್ ಅನ್ನು ನಿಂದಿಸಿದ್ದು, ಆತನಿಗೆ ತೀವ್ರವಾಗಿ ಹೊಡೆದಿದ್ದಾಳೆ. ಅಂದ ಹಾಗೇ ಈಗ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬಳು ಉದ್ಯಾನವನದಲ್ಲಿ ಕಾನ್ಸ್ಟೇಬಲ್ಗೆ ಹೊಡೆಯುತ್ತಿರುವುದನ್ನು ಕಾಣಬಹುದು. ಮಹಿಳೆ ನಿರಂತರವಾಗಿ ಕಾನ್ಸ್ಟೇಬಲ್ಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಠಾಣೆಯ ಎಸ್ಎಸ್ಐ ಜಾವೇದ್ ಆಲಂ, ಕಾನ್ಸ್ಟೇಬಲ್ ಹೆಸರು ದುರ್ಗೇಶ್ ಸೋಂಕರ್ ಮತ್ತು ಅವನನ್ನು ಹೊಡೆಯುತ್ತಿರುವ ಮಹಿಳೆ ಅವನ ಎರಡನೇ ಹೆಂಡತಿ ಎಂದು ಹೇಳಿದ್ದು. ಆಕೆಯ ದೂರಿನ ಮೇರೆಗೆ, ಈ ಪೇದೆಯನ್ನು ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಯಿತು, ಏಕೆಂದರೆ ಅವನಿಗೆ ಈಗಾಗಲೇ ಹೆಂಡತಿ ಇದ್ದಳು. ಆದರೆ ಇದರ ನಂತರವೂ, ಅವನು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದನು ಅಂತ ಹೇಳಿದ್ದಾರೆ. ಇಬ್ಬರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿದ್ದಾರೆ.
#कानपुर शोशल मिडिया पर जमकर वायरल हो रहा ये वीडियो,जहाँ एक महिला एक युवक की पिटाई करती और कपड़े फाड़ते हुए वायरल वीडियो में दिख रही है पीड़ित युवक जी आर पी का बताया गया, महिला का सिपाही पर चार शादियां करने का आरोप!
नौबस्ता थानाक्षेत्र के हंसपुरम वॉटर पार्क का मामला! pic.twitter.com/QHqDISfxBi— अर्जुन गुप्ता (@arjun9450517000) December 16, 2022