ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಸ್ಯಾನ್ಫೋರ್ಡ್ ನಗರದ ಪಾರ್ಟಿ ಸ್ಥಳದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ 10 ಜನರು ಗಾಯಗೊಂಡಿದ್ದಾರೆ. ಸೆಮಿನೋಲ್ ಕೌಂಟಿ ಶೆರಿಫ್ ಕಚೇರಿಯ ಬಂಧನ ವರದಿಯ ಪ್ರಕಾರ, ಭದ್ರತಾ ಸಿಬ್ಬಂದಿ ತಕ್ಷಣ ಶೂಟರ್ ಅನ್ನು ಹಿಡಿದು ಅವನಿಂದ ಆಯುಧವನ್ನು ಕಸಿದುಕೊಂಡರು ಎನ್ನಲಾಗಿದೆ.
ಯಾರಿಗೂ ಮಾರಣಾಂತಿಕ ಗಾಯಗಳಾಗಿಲ್ಲ ಎಂದು ಶೆರಿಫ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಗುಂಡೇಟಿನ ಗಾಯಗಳೊಂದಿಗೆ ಹತ್ತು ಜನರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅವರಲ್ಲಿ ಹೆಚ್ಚಿನವರು ಸೊಂಟದ ಕೆಳಗೆ ಏಟು ಬಿದಿದ್ದೆ ಎನ್ನಲಾಗಿದೆ.
ಭಾನುವಾರದ ಘಟನೆಯು ಯುಎಸ್ನಲ್ಲಿ ಬಂದೂಕು ಹಿಂಸಾಚಾರದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ ಮತ್ತು ಹದಿಹರೆಯದವರಿಗೆ ಬಂದೂಕುಗಳಿಗೆ ಸುಲಭವಾಗಿ ಸಿಗುವುದರಿಂದ ದೇಶಾದ್ಯಂತ ಕಾನೂನು ಜಾರಿ ಅಧಿಕಾರಿಗಳು ಹಿಂಸಾಚಾರವನ್ನು ನಿಗ್ರಹಿಸುವಲ್ಲಿ ಹೇಗೆ ತೊಂದರೆ ಎದುರಿಸುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ.
#BREAKING : 🇺🇸 A 16-year-old boy opened fire at a party near Sanford, Florida, this morning, wounding at least 10 people, including NFL player #TankDell. pic.twitter.com/5R19yPQVNi
— Mister J. – مسٹر جے (@Angryman_J) April 28, 2024