ಹೈದರಾಬಾದ್: ತೆಲಂಗಾಣದ ಸಾರ್ವಜನಿಕ ಆರೋಗ್ಯ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಅವರು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪಾದ ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಮಂಗಳವಾರ ಸಿಎಂ ಕೆಸಿಆರ್ ಅಧಿಕೃತ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಒಂದಲ್ಲ ಎರಡು ಬಾರಿ ಮುಖ್ಯಮಂತ್ರಿಯವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ.
ವಿಡಿಯೋದಲ್ಲಿ, ಶ್ರೀನಿವಾಸ ರಾವ್ ಸಿಎಂಗೆ ಹೂ ಗುಚ್ಚ ನೀಡಿ ಪಾದಕ್ಕೆ ನಮಸ್ಕರಿಸುತ್ತಾರೆ. ಈ ವೇಳೆ ಪತ್ರವೊಂದನ್ನು ಸಿಎಂಗೆ ನೀಡುತ್ತಾರೆ. ಅದನ್ನು ಸಿಎಂ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದಾದ ನಂತ್ರವೂ ಸಿಎಂ ಹೋಗುವಾಗ ಮತ್ತೊಮ್ಮೆ ಪಾದ ಸ್ಪರ್ಶಿಸಿ ನಮಸ್ಕರಿಸುವುದನ್ನು ನೋಡಬಹುದು.
Touted as top most post – Director of Public Health in Telangana Dr G Srinivas Rao touches CM KCR’s feet twice…
Looks like Kothagudem ticket is yet to be confirmed. pic.twitter.com/OfgSR7G24t
— A.Venkata Ramana (AVR) (@AerpulaVenkata) November 15, 2022
ಅಧಿಕಾರಿಯ ಲಿಖಿತ ಮತ್ತು ಮೌಖಿಕ ವಿನಂತಿಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಆರ್ಎಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳಿವೆ.
ಅಧಿಕಾರಿಗಳ ಈ ಕ್ರಮಕ್ಕೆ ನಾನಾ ಕಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಮತ್ತು ನೆಟಿಜನ್ಗಳು ಇದು ಕ್ಷುಲ್ಲಕ ಕೃತ್ಯ ಎಂದು ಬಣ್ಣಿಸಿದ್ದಾರೆ.
ಶ್ರೀನಿವಾಸ ರಾವ್ ಅವರು ಪದೇ ಪದೇ ಮನವಿ ಮಾಡಿದರೂ ಮತ್ತು ಪಾದ ಮುಟ್ಟಿದರೂ ಖಮ್ಮಂ ಸೀಟಿಗೆ ಟಿಕೆಟ್ ಕನ್ಫರ್ಮ್ ಆಗಿಲ್ಲ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದುಗಳು ಅತ್ಯಂತ ಪರಿಣಾಕಾರಿ