ವೈರಲ್ ನ್ಯೂಸ್ : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆ ಅನಾರೋಗ್ಯ ನಿಮಿತ್ತ ಡಿಸೆಂಬರ್ 27 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳವುದಕ್ಕಾಗಿ ಕಾಶಿಯ ಘಾಟ್ಗಳಲ್ಲಿ ವಿಶೇಷ ಗಂಗಾ ಆರತಿ ಮಾಡಲಾಗುತ್ತಿದೆ. ಹೀರಾಬೆನ್ ಅವರ ಉತ್ತಮ ಆರೋಗ್ಯಕ್ಕಾಗಿ ಸಲ್ಲಿಸಿದ ಪ್ರಾರ್ಥನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
प्रधानमंत्री @narendramodi के संसदीय क्षेत्र वाराणसी में हीराबा के लिए प्रार्थनाओं का दौर जारी है। आज इसी क्रम में विशेष गंगा आरती की गई। #PMModi #HeerabenModi #PMModiMother pic.twitter.com/BkomupzRnO
— Shani Mishra | शनि मिश्रा (@mishra_shani) December 28, 2022
ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಅವರ ಕುಟುಂಬದೊಂದಿಗೆ ಬಂಡೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ಮೈಸೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಅಪಘಾತ ಸಂಭವಿಸಿದೆ. ಎಂದು ವರದಿಯಾಗಿದೆ. ಪ್ರಕರಣದ ನಂತರ ಮತ್ತು ಹೀರಾಬೆನ್ ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಅಹಮದಾಬಾದ್ನ ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ಗೆ ದಾಖಲಿಸಲಾಯಿತು. ಕೂಡಲೇ ಪ್ರಧಾನಿ ಮೋದಿ ಆಸ್ಪತ್ರೆಗೆ ತೆರಳಿ ತಾಯಿ ಆರೋಗ್ಯವನ್ನು ವಿಚಾರಿಸಿದ್ದಾರೆ, ಇತ್ತೀಚಿನ ವರದಿಗಳ ಪ್ರಕಾರ ಹೀರಾಬೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ