ಯುಎಸ್: ಮಹಿಳೆಯೊಬ್ಬರು ಮೂರು ವರ್ಷದ ಬಾಲಕಿಯನ್ನು ರೈಲ್ವೇ ಹಳಿಗೆ ತಳ್ಳಿರುವ ಆಘಾತಕಾರಿ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯು ಡಿಸೆಂಬರ್ 28 ರಂದು ಯುಎಸ್ನ ಒರೆಗಾನ್ನ ಈಶಾನ್ಯ ಪೋರ್ಟ್ಲ್ಯಾಂಡ್ನಲ್ಲಿರುವ ಗೇಟ್ವೇ ಟ್ರಾನ್ಸಿಟ್ ಸೆಂಟರ್ ಮ್ಯಾಕ್ಸ್ ಪ್ಲಾಟ್ಫಾರ್ಮ್ನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ, 32 ವರ್ಷದ ಮಹಿಳೆ ಪ್ಲಾಟ್ಫಾರ್ಮ್ನಲ್ಲಿರುವ ಬೆಂಚ್ ಮೇಲೆ ಕುಳಿತಿದ್ದು, ಇದ್ದಕ್ಕಿದ್ದಂತೆ ಎದ್ದು ಅಲ್ಲೇ ನಿಂತಿದ್ದ ಮಗುವನ್ನು ರೈಲ್ವೇ ಹಳಿಗೆ ತಳ್ಳುವುದನ್ನು ನೋಡಬಹುದು.
On Dec. 28 at the Gateway Transit Center in Portland, OR, a person shoved a toddler face-first into the train tracks. The suspect was apprehended. Antifa & far-left activists in the city have argued against police patrolling public transport, saying it endangers people. pic.twitter.com/uGBBMIraH1
— The Modern Patriot (@ModernPatriotWi) December 30, 2022
ಅದೃಷ್ಟವಶಾತ್ ಆ ಸಮಯದಲ್ಲಿ ಹಳಿ ಮೇಲೆ ಯಾವುದೇ ರೈಲು ಬರಲಿಲ್ಲ. ಅಲ್ಲೇ ಇದ್ದವರು ತಕ್ಷಣವೇ ಎಚ್ಚೆತ್ತುಕೊಂಡು ಬಾಕಿಯ ಪ್ರಾಣ ಉಳಿಸಿದ್ದಾರೆ.
ಈ ಕೃತ್ಯವೆಸಗಿದ್ದಕ್ಕಾಗಿ ಮಹಿಳೆಯನ್ನು ಡಿಸೆಂಬರ್ 29 ರಂದು ಬಂಧಿಸಲಾಯಿತು. ವರದಿಯ ಪ್ರಕಾರ, ಮಗುವಿನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಾಯಗಳಾಗಿದ್ದು, ಚಿಕೆತ್ಸೆ ಮುಂದುವರೆದಿದೆ ಎನ್ನಲಾಗಿದೆ.
ಈ ಹಿಂದೆಯೂ ಹಲವು ಬಾರಿ ಮಹಿಳೆಯನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮಹಿಳೆಯನ್ನು 32 ವರ್ಷದ ಬ್ರಿಯಾನಾ ವರ್ಕ್ಮ್ಯಾನ್ ಎಂದು ಗುರುತಿಸಲಾಗಿದೆ.
BIG NEWS: ಏಷ್ಯಾದ ಮೊದಲ ಸೆಮಿ ಹೈಸ್ಪೀಡ್ ಹೈಡ್ರೋಜನ್ ರೈಲನ್ನು ಅನಾವರಣಗೊಳಿಸಿದ ಚೀನಾ, ಇದರ ಸ್ಪೀಡ್ ಎಷ್ಟು ಗೊತ್ತಾ?
BIG NEWS : ‘ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ’: ಕಾರಿಗೆ ಸಿಲುಕಿ ಮೃತಪಟ್ಟ ಯುವತಿ ಕುಟುಂಬ ಹೇಳಿಕೆ
BIG NEWS: ಏಷ್ಯಾದ ಮೊದಲ ಸೆಮಿ ಹೈಸ್ಪೀಡ್ ಹೈಡ್ರೋಜನ್ ರೈಲನ್ನು ಅನಾವರಣಗೊಳಿಸಿದ ಚೀನಾ, ಇದರ ಸ್ಪೀಡ್ ಎಷ್ಟು ಗೊತ್ತಾ?
BIG NEWS : ‘ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ’: ಕಾರಿಗೆ ಸಿಲುಕಿ ಮೃತಪಟ್ಟ ಯುವತಿ ಕುಟುಂಬ ಹೇಳಿಕೆ