ಮಹಾರಾಷ್ಟ್ರ: ಮಳೆಗಾಲವು ಸಸ್ಯ ಮತ್ತು ಪ್ರಾಣಿಗಳಿಗೆ ಮತ್ತೆ ಹೊಸ ಚೈತನ್ಯವನ್ನು ನೀಡುತ್ತದೆ. ಸುರಿಯುವ ಮಳೆಹನಿಗಳು ನಮ್ಮ ಹೃದಯವನ್ನು ಸಂತೋಷದಿಂದ ತುಂಬಿಸುತ್ತವೆ ಮತ್ತು ಪ್ರಪಂಚದ ಕೆಲವು ಸುಂದರವಾದ ದೃಶ್ಯಗಳನ್ನು ಸೃಷ್ಟಿಸುತ್ತವೆ. ಮಹಾರಾಷ್ಟ್ರದ ನಾನೇಘಾಟ್ ಜಲಪಾತದ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.
ಈ ವೀಡಿಯೊವನ್ನು ಭಾರತೀಯ ಅರಣ್ಯ ಅಧಿಕಾರಿ (ಐಎಫ್ಎಸ್) ಸುಸಂತ ನಂದಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಗಾಳಿಯ ವೇಗದ ಪ್ರಮಾಣವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನ ಮತ್ತು ವಿರುದ್ಧವಾಗಿದ್ದಾಗ, ಆ ಹಂತದಲ್ಲಿ ಜಲಪಾತವು ನೋಡಲು ಅತ್ಯಂತ ಸುಂದರವಾಗಿರುತ್ತದೆ. ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿನ ನಾನೇಘಾಟ್ ಮುಂಗಾರಿನ ಸೌಂದರ್ಯ ಇಲ್ಲಿದೆ ನೋಡಿ” ಎಂದಿದ್ದಾರೆ.
When the magnitude of wind speed is equal & opposite to the force of gravity. The water fall at its best during that stage in Naneghat of western ghats range.
Beauty of Monsoons. pic.twitter.com/lkMfR9uS3R— Susanta Nanda IFS (@susantananda3) July 10, 2022
ವೈರಲ್ ವೀಡಿಯೊದಲ್ಲಿ, ಪರ್ವತಗಳು ಹಚ್ಚ ಹಸಿರಿನ ಹೊದಿಕೆಯಲ್ಲಿ ಮೋಡಗಳು ತೇಲುತ್ತಿರುವುದನ್ನು ಕಾಣಬಹುದು. ಇದು ಎರಡು ಪರ್ವತಗಳ ನಡುವೆ ಬೀಳುವ ನೀರು ಕೆಳಗೆ ಬೀಳುವ ಬದಲು ಮತ್ತೆ ಮೇಲ್ಮುಖವಾಗಿ ಹರಿಯುವುದನ್ನು ನೋಡಬಹುದು. ಇಲ್ಲಿ ಮಳೆಯ ನೀರಿನ ಜೊತೆ ಗಾಳಿಯ ಸುಂದರ ನರ್ತನವನ್ನು ಕಣ್ತುಂಬಿಕೊಳ್ಳಬಹುದು.
ಅಧಿಕಾರಿಯು ಭಾನುವಾರ ಹಂಚಿಕೊಂಡಾಗಿನಿಂದ ಟ್ವಿಟರ್ನಲ್ಲಿ 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 16,000 ಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಬಳಕೆದಾರರು ಈ ದೃಶ್ಯ ಮತ್ತು ಅದರ ಸೌಂದರ್ಯದಿಂದ ವಿಸ್ಮಯಗೊಂಡು ಸುಂದರವಾದ ಕಾಮೆಂಟ್ಗಳನ್ನು ಮಾಡಿದ್ದಾರೆ.
BIGG NEWS : ಈ ಬಾರಿ ಲಾಲ್ ಬಾಗ್ ನಲ್ಲಿ `ದಿ.ನಟ ಪುನೀತ್ ರಾಜ್ ಕುಮಾರ್’ ಹೆಸರಿನಲ್ಲಿ `ಫ್ಲವರ್ ಶೋ’ : ಸಚಿವ ಮುನಿರತ್ನ