ಬಿಹಾರ: ಬಿಹಾರದ ಪುರ್ನಿಯಾ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯೊಬ್ಬರು ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಆತನ ಪ್ರಾನ ಕಾಪಾಡಿದ್ದಾರೆ.
ಚಲಿಸುತ್ತಿದ್ದ ರೈಲು ಹತ್ತುವಾಗ ಬ್ಯಾಲೆನ್ಸ್ ಕಳೆದುಕೊಂಡ ಪ್ರಯಾಣಿಕರು ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿ ಒದ್ದಾಡುತ್ತಿದ್ದ ವೇಳೆ ಅಲ್ಲೇ ಇದ್ದ ಆರ್ಪಿಎಫ್ ಸಿಬ್ಬಂದಿ ಆತನನ್ನು ಪ್ಲಾಟ್ಫಾರ್ಮ್ಗೆ ಎಳೆದಿದ್ದು, ಕೂದಲೆಳೆ ಅಂತರದಲ್ಲಿ ವ್ಯಕ್ತಿಯ ಜೀವ ಉಳಿಸಿದ್ದಾರೆ. ಘಟನೆಯ ವಿಡಿಯೋ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
बिहार के पूर्णिया में सतर्क आरपीएफ जवान ने चलती ट्रेन में चढ़ने के दौरान हादसे का शिकार हुए यात्री को बचाया। कृपया चलती ट्रेन में चढ़ने/उतरने का प्रयास ना करें। pic.twitter.com/2OWWQRqNae
— Ministry of Railways (@RailMinIndia) January 4, 2023
ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ಸಿಸಿಟಿವಿ ಫೂಟೇಜ್ನಲ್ಲಿ, ರೈಲು ನಿಲ್ದಾಣದಿಂದ ಹೊರಡುತ್ತಿರುವುದನ್ನು ಕಾಣಬಹುದು. ಇದೇ ವೇಳೆ ವ್ಯಕ್ತಿಯೊಬ್ಬರು ಆತುರದಿಂದ ಅದನ್ನು ಏರಲು ಪ್ರಯತ್ನಿಸುತ್ತಿದ್ದ ವೇಳೆ ಸ್ಕಿಡ್ ಆಗಿ ಕೆಳಗೆ ಬೀಳುತ್ತಾರೆ. ಇದು ಆರ್ಪಿಎಫ್ ಸಿಬ್ಬಂದಿ ಸಂಜೀವ್ ಕುಮಾರ್ ಸಿಂಗ್ ಅವರಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಪ್ಲಾಟ್ಫಾರ್ಮ್ಗೆ ಎಳೆದುಕೊಂಡರು.
ಪ್ರಯಾಣಿಕರನ್ನು ರಕ್ಷಿಸಿದ ಆರ್ಪಿಎಫ್ ಸಿಬ್ಬಂದಿಯನ್ನು ಹಲವರು ಶ್ಲಾಘಿಸಿದ್ದಾರೆ. “ಒಬ್ಬ ಜೀವ ಉಳಿಸಿದ ಈ ಆರ್ಪಿಎಫ್ ಜವಾನನಿಗೆ ನಮನ. ದೇವರು ನಿಮ್ಮನ್ನು ಆಶೀರ್ವದಿಸಲಿ”ಎಂದು ಬಳಕೆದಾರರು ಬರೆದಿದ್ದಾರೆ.